Advertisement

ಸೋಂಕು ತಡೆಗೆ ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿ

05:39 PM May 09, 2021 | Team Udayavani |

ಚಾಮರಾಜನಗರ: ಆರೋಗ್ಯ ಇಲಾಖೆ ಸಿಬ್ಬಂದಿ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನುಒಳಗೊಂಡ ತಂಡವು ಎಲ್ಲ ಗ್ರಾಮದಲ್ಲಿ ಸಮೀಕ್ಷೆ ನಡೆಸಿಕೆಮ್ಮು, ಜ್ವರ, ನೆಗಡಿ, ಗಂಟಲು ಕೆರೆತ ಲಕ್ಷಣವಿರುವಐಎಲ್‌ಐ ಹಾಗೂ ತೀವ್ರ ಉಸಿರಾಟ ತೊಂದರೆ ಇರುವಸಾರಿ ಪ್ರಕರಣಗಳನ್ನು ಪತ್ತೆ ಹಚ್ಚುವಂತೆ ಜಿಲ್ಲಾಧಿಕಾರಿಡಾ. ಎಂ.ಆರ್‌. ರವಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಸೋಂಕು ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣಭಾಗದಲ್ಲಿ ಹೆಚ್ಚು ವರದಿಯಾಗುತ್ತಿವೆ. ಹೀಗಾಗಿಗ್ರಾಮಾಂತರ ಭಾಗಗಳಲ್ಲಿ ಸಮೀಕ್ಷೆಯನ್ನು ನಡೆಸಿಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಹೆಚ್ಚುಕೋವಿಡ್‌ ಪ್ರಕರಣಗಳು ಕಂಡುಬಂದಿರುವಗ್ರಾಮಗಳಲ್ಲಿ ವಿಶೇಷವಾಗಿ ಹೆಚ್ಚು ತಂಡ ನಿಯೋಜಿಸಿಸಮೀಕ್ಷೆ ನಡೆಸಬೇಕು ಎಂದರು.

ಕೋವಿಡ್‌ ದೃಢಗೊಂಡ ಪ್ರಕರಣಗಳಲ್ಲಿ ತಂಡವುರೋಗಲಕ್ಷಣವಿರುವ ಪ್ರಾಥಮಿಕ ಸಂಪರ್ಕಿತರನ್ನುಪರೀಕ್ಷೆಗೆ ಒಳಪಡಿಸಬೇಕು. ಇತರೆ ಕಾಯಿಲೆಗಳಿಂದಬಳಲುತ್ತಿರುವ ಹಿರಿಯ ನಾಗರಿಕರ ಸಮೀಕ್ಷೆ ಸಹಕೈಗೊಳ್ಳಬೇಕು. ಕಂಟೈನ್‌ಮೆಂಟ್‌ ವಲಯಗಳಲ್ಲಿಯೂಸರ್ವೆ ಚುರುಕುಗೊಳಿಸಬೇಕು.

ತಾಲೂಕು ಆರೋಗ್ಯಅಧಿಕಾರಿಗಳು, ತಾಪಂ ಇಒಗಳು ಸಮೀಕ್ಷೆಯಮೇಲ್ವಿಚಾರಣೆ ಮಾಡುವ ಮೂಲಕ ಸೂಚಿತಅವಧಿಯೊಳಗೆ ವರದಿ ಸಲ್ಲಿಸಬೇಕೆಂದರು.ಜಿಪಂ ಸಿಇಒ ಹರ್ಷಲ್‌ ಬೋಯರ್‌ ಮಾತನಾಡಿ,ಗ್ರಾಪಂ ಮಟ್ಟದಲ್ಲಿ ಕಾರ್ಯಪಡೆಗಳು ಕೋವಿಡ್‌ ತಡೆಗೆಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದರು.ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಸಂಜೀವ್‌,ನೋಡೆಲ್‌ ಅಧಿಕಾರಿಗಳಾಗಿರುವ ಉಪ ಅರಣ್ಯಸಂರಕ್ಷಣಾಧಿಕಾರಿಗಳಾದ ಸಂತೋಷ್‌ಕುಮಾರ್‌,ಏಡುಕುಂಡಲು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next