ನರಿಮೊಗರು: ಸರ್ವೆ ಗ್ರಾಮದ ಸರ್ವೆ ಕಾಡಬಾಗಿಲು ಎಂಬಲ್ಲಿ ರಾಜ್ಯ ಹೆದ್ದಾರಿ 100ಕ್ಕೆ ಹೊಂದಿಕೊಂಡಂತಿರುವ ಗುಡ್ಡವನ್ನು ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಸಮತಟ್ಟುಗೊಳಿಸುವ ಕೆಲಸ ಮಾಡಿದ್ದ ಖಾಸಗಿ ನಿರ್ಮಾಣ ಸಂಸ್ಥೆ ಕಾಮಗಾರಿಯ ಸಂದರ್ಭ ರಾಜ್ಯ ಹೆದ್ದಾರಿಯ ಚರಂಡಿಗಳನ್ನು ಮಣ್ಣಿನಿಂದ ಮುಚ್ಚಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಮಳೆ ನೀರು ಹೆದ್ದಾರಿಯಲ್ಲೇ ಹರಿಯುವಂತಾಗಿದೆ.
ಅಪಾಯಕಾರಿ ಮರಗಳು
ಕಾಡಬಾಗಿಲು ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಹಲವಾರು ಅಪಾಯಕಾರಿ ಮರಗಳಿದ್ದು, ಈ ಬಾರಿಯ ಮೊದಲ ಮಳೆಗೆ ಮರವೊಂದು ರಸ್ತೆಗೆ ಬಿದ್ದಿದೆ. ಇನ್ನಷ್ಟು ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಯತ್ತ ವಾಲಿಕೊಂಡಿದ್ದು, ಗಾಳಿ ಮಳೆ ಬಂದರೆ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸಾಧ್ಯತೆ ಇದೆ. ಅಧಿಕಾರಿಗಳು ಎಚ್ಚೆತ್ತು ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚರಂಡಿಗೆ ಮಣ್ಣು ಸುರಿದು ಮುಚ್ಚಿ ರಸ್ತೆ ಮಾಡಿದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಲೋಕೋಪಯೋಗಿ ಇಲಾಖೆ ಚರಂಡಿ ಮರು ನಿರ್ಮಾಣ ಅಥವಾ ಮೋರಿ ಅಳವಡಿಕೆ ಕುರಿತು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ಕೆಸರುಮಯ ನೀರು ರಸ್ತೆಯಲ್ಲಿ ಹರಿದು ಅಪಘಾತಕ್ಕೆ ಕಾರಣವಾಗಲಿದೆ.
Advertisement
ಗುಡ್ಡವನ್ನು ಸಮತಟ್ಟುಗೊಳಿಸುವ ಸಂದರ್ಭ ಗುಡ್ಡದಿಂದ ಮಣ್ಣು ಸಾಗಿಸಲು 2 ಕಡೆ ಚರಂಡಿಗೆ ಮಣ್ಣು ಸುರಿದು ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಗಳನ್ನು ನಿರ್ಮಿಸಿದ್ದರಿಂದ ಕೆಸರುಮಯ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರಿಗೆ ಅಪಾಯಕಾರಿಯಾಗುವ ಸಂಭವ ಇದೆ. ರಸ್ತೆಯೂ ಹಾಳಾಗುವ ಸಾಧ್ಯತೆ ಇದೆ.
Related Articles
ಇಲಾಖೆ ಕ್ರಮ ಕೈಗೊಳ್ಳಲಿ