Advertisement

ಸಂಸದರಿಗೆ ಇನ್ನೊಂದು ಕೆಲಸ:ಸರ್ವೆ ಮಾಡಿ

03:12 PM Dec 31, 2017 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ಅಪ್ಲಿಕೇಶನ್‌ ಅನ್ನು ಬಳಸದ್ದಕ್ಕೆ ಸ್ವಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಸಂಸದರಿಗೆ ಇನ್ನೊಂದು ಕೆಲಸ ವಹಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಪರಿಣಾಮದ ಬಗ್ಗೆ ರೂಪಿಸಲಾದ ಸರ್ವೆಗೆ ಸಂಸದರು ಪ್ರತಿಕ್ರಿಯಿಸಬೇಕೆಂದು ಸೂಚಿಸಲಾಗಿದೆ. ಯೋಜನೆಗಳು ಜನರ ಜೀವನದ ಮೇಲೆ ಯಾವ ಪರಿಣಾಮ ಬೀರಿವೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬರಲಿದೆ. ಇನ್ನೊಂದೆಡೆ ಅಧಿಕೃತ ಅಂಕಿ ಅಂಶಗಳ ಹೊರತಾಗಿ, ಯೋಜನೆಗಳ ಯಶಸ್ಸನ್ನು ಅಳೆಯಲು ಅನುವಾಗಲಿದೆ. ಇವೆಲ್ಲದರ ಜತೆಗೆ ಸಂಸದರು ಎಷ್ಟು ಸಕ್ರಿಯವಾಗಿದ್ದಾರೆ ಎಂಬುದು ಮೋದಿಗೆ ತಿಳಿಯಲಿದೆ.

Advertisement

ಕೆಲವೇ ದಿನಗಳ ಹಿಂದೆ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, “ನರೇಂದ್ರ ಮೋದಿ ಆ್ಯಪ್‌’ನಲ್ಲಿ ಕಳುಹಿ ಸಿದ ಸಂದೇಶಗಳಿಗೆ ಸಂಸದರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿ ದ್ದರು. ಆ್ಯಪ್‌ನಲ್ಲಿ ಸಂಸದರು ಸಕ್ರಿಯವಾಗಿರಬೇಕೆಂದೂ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next