Advertisement

ಮೂರು ಸಾವಿರ ಪೊಲೀಸರ ಕಣ್ಗಾವಲು

10:52 AM Dec 13, 2019 | Suhan S |

ಬೆಂಗಳೂರು: ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಭಾರೀ ಪೊಲೀಸ್‌ ಬಂದೋಬಸ್ತ್ನಿ ಯೋಜಿಸಲಾಗಿದ್ದು, ಮೂರು ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

Advertisement

ಈ ಕುರಿತು ಸೋಮವಾರ ಮಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ನಗರ ಕಮಿಷನರೇಟ್‌ ವ್ಯಾಪ್ತಿಗೆ ಬರುವ ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 28 ಪೊಲೀಸ್‌ ಠಾಣೆಗಳು ಬರಲಿದ್ದು, ಈ ವ್ಯಾಪ್ತಿಯಲ್ಲಿ ಡಿ.3ರಂದು ಸಂಜೆ 6 ಗಂಟೆಯಿಂದ ಡಿ.6ರಂದು ಸಂಜೆ 6ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಾಗೇ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಈ ಕ್ಷೇತ್ರಗಳಲ್ಲಿ ಡಿ.5ರಂದು ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಮತದಾನ ನಡೆಯಲಿದ್ದು, ಪೊಲೀಸ್‌ ಭದ್ರತೆ ನೀಡಲಾಗಿದೆ. 7 ಮಂದಿ ಡಿಸಿಪಿಗಳು, 14 ಎಸಿಪಿಗಳು, 30 ಇನ್‌ಸೆಕ್ಟರ್‌, 68 ಸಬ್‌ಇನ್‌ ಸ್ಪೆಕ್ಟರ್‌, 160 ಎಎಸ್‌ಐ, ಸಿಬ್ಬಂದಿ 1,666, ಗೃಹರಕ್ಷಕ ದಳದ 951 ಮಂದಿ ನಿಯೋಜಿಸಲಾಗಿದೆ. ಜತೆಗೆ 10 ಸಿಎಪಿಎಫ್, 38 ಕೆಎಸ್‌ಆರ್‌ಪಿ, 40 ಸಿಎಆರ್‌, 4 ಆರ್‌ಐವಿ ಹಾಗೂ 3 ಕ್ಯೂಆರ್‌ಟಿತಂಡಗಳ ಸಿಬ್ಬಂದಿ ಕೂಡ ಕರ್ತವ್ಯ

ನಿರ್ವಹಿಸಲಿದ್ದಾರೆ.

ಅಲ್ಲದೆ, 26 ಫ್ಲೈಯಿಂಗ್‌ಸ್ಕ್ವಾಡ್‌, 22 ಎಸ್‌ಎಸ್‌ಟಿ ಸ್ಕ್ವಾಡ್‌ ಇರಲಿವೆ. ನಾಲ್ಕು ಕ್ಷೇತ್ರಗಳಲ್ಲಿ 1064 ಮತಕೇಂದ್ರ ಗಳಿದ್ದು, ಈ ಪೈಕಿ 826 ಸಾಮಾನ್ಯ ಹಾಗೂ 238 ಸೂಕ್ಷ್ಮ ಕೇಂದ್ರಗಳು ಇರಲಿವೆ. ಕೆ.ಆರ್‌.ಪುರಂನಲ್ಲಿ 28 ಮತ್ತು ಶಿವಾಜಿನಗರದಲ್ಲಿ 8ಹಾಗೂ ಈಶಾನ್ಯ ವಿಭಾಗದಲ್ಲಿ ಐದು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೇ ಈ ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ 2331 ಶಸ್ತ್ರಾಸ್ತ್ರಗಳಿದ್ದು, ಈ ಪೈಕಿ 2028 ಜಮೆ ಮಾಡಿಸಿಕೊಳ್ಳಲಾಗಿದೆ. 291ಕ್ಕೆ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಈ ವ್ಯಾಪ್ತಿಯ 620 ಮಂದಿ ರೌಡಿಶೀಟರ್‌ಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದು, ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

15.92 ಲಕ್ಷ ನಗದು ಜಪ್ತಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇದುವರೆಗೂ 27 ಪ್ರಕರಣಗಳು ದಾಖಲಾಗಿವೆ.15,92,855 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಭಾಸ್ಕರ್‌ ರಾವ್‌ ಹೇಳಿದರು.ಮತ ಎಣಿಕೆ ಕೇಂದ್ರಗಳಲ್ಲೂ ಭದ್ರತೆ: ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿಮೌಂಟ್‌ ಕಾರ್ಮೆಲ್‌ ಪಿಯು ಮಹಿಳಾ ಕಾಲೇಜು, ಕೆ.ಆರ್‌.ಪುರಂ, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಅಶೋಕನಗರದ ಸೇಂಟ್‌ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಮತ್ತುಯಶವಂತಪುರ ಕ್ಷೇತ್ರದ ಮೈಸೂರು ರಸ್ತೆಯಲ್ಲಿರುವ ಆರ್‌.ವಿ. ಎಂಜಿನಿಯರಿಂಗ್‌ಕಾಲೇಜು ಹಾಗೂ ಹೊಸಕೋಟೆ ಕ್ಷೇತ್ರದಮತ ಎಣಿಕೆ ದೇವನಹಳ್ಳಿಯ ಆಕಾಶ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆಯಲಿದ್ದು, ಶಸ್ತ್ರ ಸಜ್ಜಿತ ಸ್ಥಳೀಯ ಪೊಲೀಸರ ಜತೆಗೆ ಕೇಂದ್ರ ಸೇನಾ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next