ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕಣ್ಗಾವಲು ಹಾಗೂ ಸಾರ್ವಜನಿಕ ಸುರಕ್ಷತಾ ಕ್ರಮಗಳ ಕಾರ್ಯ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಆದೇಶಿಸಿದ್ದಾರೆ. ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ ಸಂಪರ್ಕ ಪತ್ತೆ ಹಚ್ಚುವಿಕೆ, ಮಾದರಿ ಪರೀಕ್ಷೆ ಮತ್ತು ಪ್ರಯೋಗಾಲಯ, ಕಂಟೈನ್‌ಮೆಂಟ್‌ಜೋನ್ ನಿರ್ವಹಣೆ, ಗ್ರಾಪಂ ಟಾಸ್ಕ್ ಫೋರ್ಸ್, ನಗರಸಭೆ,
ಪುರಸಭೆ ಪಟ್ಟಣ ಪಂಚಾಯಿತಿ ವಾರ್ಡ್ ವಿಪತ್ತು ನಿರ್ವಹಣಾ ಸಮಿತಿ, ಕ್ವಾರಂಟೈನ್ ನಿಗಾವಣೆ, ಪಥ್ಯಾಹಾರ ಪೂರೈಕೆ, ಗಂಟಲುದ್ರವ ಸಂಗ್ರಹಣಾ ಕೇಂದ್ರಗಳ ನಿರ್ವಹಣೆ, ಕೋವಿಡ್ ಸೋಂಕಿತರ ದಾಖಲಿಸುವಿಕೆ ಹಾಗೂ ಅಂಬುಲೆನ್ಸ್ ನಿರ್ವಹಣೆ, ಕೋವಿಡ್ ಆರೈಕೆ ಕೇಂದ್ರಗಳು, ಮೃತದೇಹಗಳ ನಿರ್ವಹಣೆ ಹಾಗೂ ಮಾತೃ ಮತ್ತು ಮಗುವಿನ ಸೇವಾ ಕಾರ್ಯಕ್ರಮ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಗಳಲ್ಲಿಯೂ ಕರ್ತವ್ಯಗಳ ನಿರ್ವಹಣೆಗಾಗಿ ಒಬ್ಬರು ನೋಡೆಲ್ ಅಧಿಕಾರಿ ಇದ್ದು, ಇವರಿಗೆ ಸಹಾಯಕ ಅಧಿಕಾರಿಗಳು ನೆರವಾಗಲಿದ್ದಾರೆ.
ನೋಡೆಲ್ ಅಧಿಕಾರಿ: ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯತಂಡಕ್ಕೆ ಜಿಪಂ ಸಿಇಒ ನಾರಾಯಣರಾವ್ (ಮೊ: 9480858000) ನೋಡೆಲ್ ಅಧಿಕಾರಿಯಾಗಿದ್ದು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕಾಂತರಾಜು, ಎಲ್ಲಾ ತಾಲೂಕು ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಮತ್ತು ಚಾಮರಾಜನಗರ ಹಾಗೂ ಕೊಳ್ಳೇಗಾಲ ಪೊಲೀಸ್ ಉಪ ಅಧೀಕ್ಷಕರು ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಾದರಿ ಪರೀಕ್ಷೆ: ಮಾದರಿ ಪರೀಕ್ಷೆ ಮತ್ತು ಪ್ರಯೋಗಾಲಯ ತಂಡಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ನೋಡೆಲ್ ಅಧಿಕಾರಿಯಾಗಿದ್ದು, ಎಲ್ಲಾ ತಾಲೂಕು ತಹಶೀಲ್ದಾರರು, ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಮುಖ್ಯಸ್ಥರಾದ ಡಾ. ಜೆ.ವಿ.ಸತೀಶ್ ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಂಟೈನ್ಮೆಂಟ್ ಝೋನ್ ನಿರ್ವಹಣೆ: ಕಂಟೈನ್ ಮೆಂಟ್ ಝೋನ್‌ಗಳ ನಿರ್ವಹಣೆ ತಂಡದಲ್ಲಿ ಉಪವಿಭಾಗಾಧಿಕಾರಿ ನಿಖೀತಾ (ಮೊ. 9742164846) ಅವರು ನೋಡೆಲ್ ಅಧಿಕಾರಿಯಾಗಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ ಪ್ರದೇಶದ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್, ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇನ್ಸಿಡೆಂಟ್ ಕಮಾಂಡರ್ (ಗ್ರಾಪಂ ವ್ಯಾಪ್ತಿ ಪ್ರದೇಶ) ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಸಹಾಯಕ ಅಧಿಕಾರಿಗಳು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ ವಿಪತ್ತು ನಿರ್ವಹಣಾ ತಂಡಕ್ಕೆ ಜಿಲ್ಲಾ ನಗರಾಭಿವೃಧಿ ಕೋಶದ ಯೋಜನಾ ನಿದೇಶಕರಾದ ಕೆ.ಸುರೇಶ್ (ಮೊ:7406127698) ನೋಡೆಲ್ ಅಧಿಕಾರಿಯಾಗಿದ್ದು, ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ಪೌರಾಯುಕ್ತರು ಹಾಗೂ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರು ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೋವಿಡ್ ಆರೈಕೆ ಕೇಂದ್ರಗಳ ತಂಡಕ್ಕೆ ಜಿಲ್ಲಾ ಅಸ್ಪತ್ರೆಯ ಹೃದ್ರೋಗ ತಜ್ಞ ಡಾ. ರವಿಶಂಕರ್ (ಮೊ. 9449204640) ಅವರು ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.