Advertisement

ನಾಯಿಯ “ಅನೈತಿಕ ಸಂಬಂಧ’ಕ್ಕೆ ತಕ್ಕ ಶಾಸ್ತಿ!

12:32 AM Jul 25, 2019 | Team Udayavani |

ತಿರುವನಂತಪುರ: ತನ್ನ ಸಾಕು ನಾಯಿ ನೆರೆಮನೆಯ ನಾಯಿಯೊಂದಿಗೆ “ಅನೈತಿಕ’ ಸಂಬಂಧ ಹೊಂದಿದೆ ಎಂದು ಆರೋಪಿಸಿ, ಆ ನಾಯಿಯ ಮಾಲೀಕ ಅದನ್ನು ದೂರ ತಳ್ಳಿರುವ ಪ್ರಕರಣ ತಿರುವನಂತಪುರದಿಂದ ವರದಿಯಾಗಿದೆ!

Advertisement

“ಪಮೇರಿಯನ್‌’ ಜಾತಿಗೆ ಸೇರಿದ ಹೆಣ್ಣು ನಾಯಿಯಾದ ಅದು ಈಗ ಪೀಪಲ್‌ ಫಾರ್‌ ಅನಿಮಲ್ಸ್‌ (ಪಿಎಫ್ಎ) ಸಂಸ್ಥೆಯ ಕಾರ್ಯಕರ್ತೆ ಶಮೀಮ್‌ ಎಂಬವರ ಬಳಿಯಲ್ಲಿ ಸುರಕ್ಷಿತವಾಗಿದ್ದು, ಅದರ ಮಾಲೀಕರನ್ನು ಹುಡುಕಲು ಫೇಸ್‌ಬುಕ್‌ ಮೊರೆ ಹೋಗಲಾಗಿದೆ.

ತಿರುವನಂತಪುರದ ವರ್ಲ್ಡ್ ಮಾರ್ಕೆಟ್‌ ಅನನ್ಯಾ ಬಳಿಯಲ್ಲಿ ಪಿಎಫ್ಎ ಕಾರ್ಯಕರ್ತೆ ಶಮೀಮ್‌ಗೆ ಸಿಕ್ಕ ಈ ನಾಯಿಯ ಕೊರಳ ಪಟ್ಟಿಯಲ್ಲಿ ಚೀಟಿಯನ್ನು ಕಟ್ಟಲಾಗಿತ್ತಂತೆ.ಅದರಲ್ಲಿ, “ಈ ನಾಯಿಗೆ ಬಿಸ್ಕೇಟ್‌, ಹಾಲು ನೀಡಬಹುದು. ಇದು ನೆರೆಯ ನಾಯಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಇದನ್ನು ಮನೆಯಿಂದ ಓಡಿಸಲಾಗಿದೆ’ ಎಂದು ಬರೆಯಲಾಗಿತ್ತಂತೆ!

Advertisement

Udayavani is now on Telegram. Click here to join our channel and stay updated with the latest news.

Next