Advertisement
ತಾಲೂಕಿನ 36ನೇ ಉಪ ಕಾಲುವೆಯ ಎರಡು ಪೈಪ್‌ಗ್ಳು ಕುಸಿದ ಹಿನ್ನೆಲೆಯಲ್ಲಿ ಅದರ ಬದಲಾಗಿ ಬೇರೆ ಪೈಪ್‌ಗ್ಳ ಮೂಲಕ ನೀರು ಹರಿಸಲು ಪ್ರಯತ್ನಿಸಲಾಗಿದೆ. ಮುಖ್ಯ ಕಾಲುವೆಗೆ ಹಾಕಿದ ನಾಲ್ಕು ಪೈಪ್‌ಗ್ಳಲ್ಲಿ ತಲಾ 3 ಅಡಿ ನೀರು ಹರಿಸಿದಾಗ ಉಪ ಕಾಲುವೆ ಭರ್ತಿಯಾಗಿ ಹರಿಯುತ್ತದೆ. ಇದನ್ನು ತಪ್ಪಿಸಲು ನಾಲ್ಕು ಹೊಸ ಪೈಪ್ ಹಾಕಿ, ಹರಸಾಹಸಕ್ಕೆ ಕೈ ಹಾಕಿದ್ದು, ರೈತ ವಲಯವನ್ನು ಕೆರಳಿಸಿದೆ.
Related Articles
Advertisement
ತಾತ್ಕಾಲಿಕವಾಗಿ ಮುಖ್ಯ ಕಾಲುವೆ ಒಡ್ಡು ಕುಸಿಯದಂತೆ ಮಾತ್ರ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ವಹಿಸಿದಂತಾಗಿದೆ. ಆದರೆ, ಮುಚ್ಚಿಹೋಗಿರುವ ಎರಡು ಪೈಪ್‌ಗ್ಳ ಮೂಲಕ 44 ಸಾವಿರಕ್ಕೂ ಹೆಚ್ಚಿನ ಜಮೀನಿಗೆ ನೀರು ಹರಿಸುವ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ.
ತಾತ್ಕಾಲಿಕವಾಗಿ ಸಮಾಧಾನಕ್ಕೆ ಹಾಕಿರುವ ಪೈಪ್‌ಗ್ಳಿಂದಲೂ ನೀರು ಹರಿಯುತ್ತಿಲ್ಲ. ಮುಖ್ಯ ಕಾಲುವೆ ಶೂನ್ಯ ಪಾಯಿಂಟ್‌ನಿಂದಲೇ ಗೇಜ್ ಕಡಿತಗೊಳಿಸಲಾಗಿದೆ. ನೀರಿನ ಹರಿವು ತಗ್ಗಿಸದ ರೀತಿಯಲ್ಲಿ 36ನೇ ಉಪ ಕಾಲುವೆ ಭಾಗದ ಹತ್ತಾರು ಹಳ್ಳಿಯ ರೈತರ ಜಮೀನುಗಳಿಗೆ ನೀರೊದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲವೆಂಬ ಕೂಗು ಬಲವಾಗಿದೆ.
ಇದನ್ನೂ ಓದಿ: ಶಾಸಕರ ಭವನ ನಿರ್ಮಾಣಕ್ಕೆ ಗುತ್ತಿಗೆ ವಿಘ್ನ!
ಸದ್ಯ ಒಡ್ಡಿಗೆ ಚೀಲಗಳನ್ನು ಹಾಕಿ, ಕಪ್ಪು ಮಣ್ಣು ಹಾಕಲಾಗಿದೆ. ಗೇಟ್‌ಗಳ ಥ್ರಡ್ ಇಳಿಸಿ ನೀರಿನ ಹರಿವು ಕಡಿಮೆ ಮಾಡಿದ್ದು, ಪ್ರತ್ಯೇಕವಾಗಿ ಪೈಪ್ ಮುಖ್ಯ ಕಾಲುವೆಗೆ ಹಾಕಿ, ಅಲ್ಲಿಂದ ಉಪ ಕಾಲುವೆಗೆ ನೀರು ಕೊಡಲು ಪ್ರಯತ್ನಿಸಲಾಗಿದೆ. ನೀರಿನ ಕೊರತೆ ನಿವಾರಿಸುವುದಕ್ಕೆ ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ. -ಹನುಮಂತಪ್ಪ, ಎಇಇ, ನಂ.3 ನೀರಾವರಿ ಇಲಾಖೆ ಉಪವಿಭಾಗ, ಸಿಂಧನೂರು
-ಯಮನಪ್ಪ ಪವಾರ