Advertisement

ಸಪ್ರೈಸ್‌ ಗಿಫ್ಟ್

08:15 AM Feb 09, 2018 | |

ಅವಳು ತನ್ನ ಕೂದಲನ್ನು ಮಾರಿ ಪತಿಗಾಗಿ ಗಡಿಯಾರಕ್ಕಾಗಿ ಪುಟ್ಟ ಚೈನ್‌ ತೆಗೆದುಕೊಂಡು ಹೋದರೆ, ಅವನು ತನ್ನ ಬಳಿಯಿದ್ದ ಗಡಿಯಾರವನ್ನು ಮಾರಿ ಅವಳಿಗಾಗಿ ಬಾಚಣಿಕೆ ಉಡುಗೊರೆ ತರುವ ಸನ್ನಿವೇಶವನ್ನು ಓ ಹೆನ್ರಿಯವರು ದಿ ಗಿಫ್ಟ್ ಆಫ್ ಮ್ಯಾಗಿ ಪುಸ್ತಕದಲ್ಲಿ ಅವರು ಪ್ರೀತಿಯಿಂದ ಕ್ರಿಸ್ಮಸ್‌ ಉಡುಗೊರೆ ಕೊಡಲು ತಮ್ಮ ಬಡತನದಲ್ಲೂ ಅನಿರೀಕ್ಷಿತ ಉಡುಗೊರೆ ನೀಡುವುದನ್ನು ಬಣ್ಣಿಸಿರುವ ಬಗೆ ಅವರ್ಣನೀಯ.

Advertisement

ಹುಟ್ಟುಹಬ್ಬದ ದಿನವೋ, ಮದುವೆ ವಾರ್ಷಿಕೋತ್ಸವಕ್ಕೋ, ಪ್ರಥಮ ಭೇಟಿಯ ದಿನ ಇತ್ಯಾದಿ ಕಾರಣಗಳಿಗಾಗಿ ಒಬ್ಬರಿಗೊಬ್ಬರು ಸಪ್ರೈìಸ್‌ ಉಡುಗೊರೆಗಳನ್ನು ನೀಡುವುದು ಇಂದು ಬಹು ಸಾಮಾನ್ಯ. ಆ ಉಡುಗೊರೆಗಳಿಗಾಗಿಯೇ ಬಹಳ ಅಂಗಡಿಗಳು ಮಾರುಕಟ್ಟೆಯಲ್ಲಿ ತೆರೆದಿರುವುದನ್ನು ಕಾಣಬಹುದು. ಶುಭ ಹಾರೈಕೆ ಪತ್ರಗಳು, ಫೋಟೋ, ಹೆಸರುಗಳನ್ನು ಛಾಪಿಸಿದ ತರಹೇವಾರಿ ಕಾಫಿ ಮಗ್‌ಗಳು, ವಿಶೇಷ ಬೀಗದ ಕೈಗಳು, ಗೊಂಬೆಗಳು ಒಂದೇ ಎರಡೇ. ಅಂಗಡಿಗೆ ಹೋದರೆ ಎಲ್ಲವನ್ನು ಕೊಳ್ಳೋಣವೆನಿಸದಿರದು.

ಬಹಳ ಹಿಂದೆ ಓದಿದ ಕಥೆಯೊಂದರಲ್ಲಿ ಅವಳ ಹುಟ್ಟುಹಬ್ಬದಂದು ಯಾರೊಬ್ಬರೂ ಶುಭಾಶಯ ಹೇಳದೇ ಆಕೆ ಬೇಸರಿಸಿಕೊಂಡಾಗ ಸಂಜೆ ಮನೆಗೆ ಬರುತ್ತಲೇ ಮನೆಯವರೆಲ್ಲ ಅನಿರೀಕ್ಷಿತವಾದ ಪಾರ್ಟಿಗಾಗಿ ಸಿದ್ಧಪಡಿಸಿರುವುದನ್ನು ಕಂಡು ಬೆಳಗ್ಗಿನಿಂದಿದ್ದ ಬೇಸರವೆಲ್ಲ ಕಳೆದು ಒಮ್ಮೆಲೆ ಉಲ್ಲಸಿತಳಾಗುತ್ತಾಳೆ.

ಪ್ರೀತಿಗೆ  ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಕೋರಿಯರಿನವನೊಬ್ಬ ಬಂದು ಕೇಕು, ಹೂವಿನ ಗೂತ್ಛ ನೀಡಿ ಹೋದಾಗ, ಯಾರು ಕಳುಹಿಸಿದ್ದು ಎಂಬ ಕೌತುಕ. ಐದೇ ನಿಮಿಷದಲ್ಲಿ ಅವಳ ಭಾವಿ ಪತಿರಾಯ ಅವಳ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಉಡುಗೊರೆ ಕಳುಹಿಸಿರುವುದು ತಿಳಿದು ಅವಳಿಗೆ ಬಹಳ ಖುಷಿಯಾಗುತ್ತದೆ. ಮದುವೆಯ ನಂತರದ ಅವಳ ಮೊದಲ ಹುಟ್ಟುಹಬ್ಬಕ್ಕಾಗಿ ಸೊಲೈಟರನ ಓಲೆ ತಂದಾಗಲಂತೂ ಬಹಳೇ ಖುಷಿ.

ಪ್ರೀತಿ ತಾನೇನು ಕಡಿಮೆಯೆಂಬಂತೆ ಅವನ ಹುಟ್ಟುಹಬ್ಬದಂದು ಶಾಖಾಹಾರಿಯಾದ ಅವಳು ಮೂಗು ಹಿಡಿದು ಅವನಿಗಿಷ್ಟವೆಂದು ಮೀನು ಕರಿದಿಟ್ಟು ಅವನು ಕೆಲಸದಿಂದ ಬಂದೊಡನೆ ಊಟಕ್ಕೆ ಬಡಿಸಿದಳು. ಅವನಿಗಾಗಿ ಕವನವೊಂದನ್ನು ಬರೆದು ಮಲಗುವ ಕೋಣೆಯ ಬಾಗಿಲಿಗೆ ಅಂಟಿಸಿದ್ದಳು.

Advertisement

ಕಚೇರಿಯಲ್ಲಿ ಸಿಬಂದಿಯೊಬ್ಬನ ಪತ್ನಿ  (ಅವಳೂ ನಮ್ಮ ಕಚೆೇರಿಯವಳೇ)  ಅವನಿಗಾಗಿ ಲೇಖನವೊಂದನ್ನು ಬರೆದು ಪ್ರಕಟವಾದ ಪತ್ರಿಕೆಯ ಪ್ರತಿಯನ್ನು ಅವನು ಕಚೆೇರಿ ತಲುಪುವ ಮುಂಚೆಯೇ ಆ ಪ್ರತಿಯನ್ನು ಅವನ ಟೇಬಲ… ಬಳಿ ಲಗತ್ತಿಸುವ ಮೂಲಕ ಅವನ ಹುಟ್ಟುಹಬ್ಬವನ್ನು ಆಚರಿಸಿದ್ದಳು.

ಗೆಳತಿಯ ಮದುವೆಯಾದ ವರ್ಷದಲ್ಲಿ ಅವಳ ಪತಿ ಅವಳ ಹುಟ್ಟುಹಬ್ಬದಂದು ಅವಳಿಗೆ ತಿಳಿಯದೇ ಅವಳ ಗೆಳೆಯ-ಗೆಳತಿಯರನ್ನು ಆಹ್ವಾನಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದನು. ಅದರಂತೆ ಇನ್ನೊಬ್ಬಳು ಗೆಳತಿ ತನ್ನ ಹುಟ್ಟುಹಬ್ಬವನ್ನೂ ಅದೇ ರೀತಿ ಆಚರಿಸಲಿ ಎಂಬ ಆಶಯದಿಂದ ನನ್ನ ಮೊಬೈಲ… ಸಂಖ್ಯೆಯನ್ನು ಪತಿರಾಯರ ಮೊಬೈಲ್‌ನಲ್ಲಿ, ಅದರಂತೇ ಪತಿರಾಯರ ಸಂಖ್ಯೆಯನ್ನು ನನ್ನ ಮೊಬೈಲಿನಲ್ಲಿ ದಾಖಲಿಸಿದ್ದಳು. ನಾವು ಸ್ನೇಹಿತರೆಲ್ಲ ಸದ್ಯ ಮದುವೆಯಾದ ಜೋಡಿಗೆ ಏಕೆ ತೊಂದರೆ ನೀಡುವುದೆಂದು ಅವಳ ಹುಟ್ಟುಹಬ್ಬದಂದು ಶುಭಾಶಯ ಹೇಳಿ ಸುಮ್ಮನಾದೆವು. ಸ್ವಲ್ಪ$ ದಿನದಲ್ಲಿ ಕರೆ ಮಾಡಿದ ಆಕೆ, “ಈ ರೀತಿ ನಾನು ಮಾಡಿದ್ದೇಕೆ ಎಂದರೆ, ನೀವೆಲ್ಲ ಸಪ್ರೈìಸ್‌ ನೀಡಲಿ ಎಂದು ಆಶಿಸಿ¨ªೆ ‘ ಎಂದು ತಿಳಿಸಿದಳು!

ಹೀಗೆ ಅಕಸ್ಮಾತ್ತಾಗಿ ಬಯಸದೇ ಬಂದ ಭಾಗ್ಯದಂತೆ ನೀಡುವ ಸಪ್ರೈìಸುಗಳು ಮನಸ್ಸನ್ನು ಉಲ್ಲಸಿತರಾಗಿಸುವುದು. ಇಬ್ಬರ ನಡುವಿನ ಮನಸ್ಸು ಕಳೆದು ಪ್ರೀತಿ ಇಮ್ಮಡಿಸಲು ಸಹಾಯವಾಗಬಹುದು. ಕೆಲವೊಮ್ಮೆ ಸಂದರ್ಭಾನುಸಾರವೋ, ಅಚಾನಕ್ಕಾಗಿಯೋ ನೀಡಿದ ಈ ರೀತಿಯ ಉಡುಗೊರೆಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ರೀತಿ ಉಡುಗೊರೆಗಳನ್ನು ನೀಡುವಾಗ ಬಹಳ ಯೋಚನೆ ಮಾಡಿ ಕೊಡಬೇಕಾಗಬಹುದು.

ಸಣ್ಣವಳಿರುವಾಗ ದೊಡ್ಡಮ್ಮನ ಹುಟ್ಟುಹಬ್ಬದಂದು ಅವಳಿಗೆ ಸಪ್ರೈìಸ್‌ ನೀಡಬೇಕೆಂದು ನನ್ನನ್ನು ಕರೆದುಕೊಂಡು ಬಸ್ಸಿನಲ್ಲಿ ಹೊರಟರು. ಧಾರವಾಡದ ಅವರ ಮನೆಗೆ ತಲುಪಿ ನೋಡಿದರೆ ಮನೆಗೆ ಬೀಗ. ಪಕ್ಕದ ಮನೆಯವರು ಅವರು ಬೆಳಗಾವಿಯಲ್ಲಿ ಯಾರಧ್ದೋ ಮದುವೆಗೆ ಹೋಗಿ¨ªಾರೆಂದು ತಿಳಿಸಿದರು. ಹೀಗೆ ಅಮ್ಮನ ಸಪ್ರೈìಸ್‌ ಕಥನ ನಮ್ಮನ್ನು ಪಕ್ಕದ ಮನೆಯಲ್ಲಿ ಕಳೆಯುವಂತಾಗಿ ನಮಗೇ ಅನಿರೀಕ್ಷಿತ ಉಡುಗೊರೆಯಾಯಿತು!

ಸವಿತಾಳೆಂಬ ಗೆಳತಿಯ ಮದುವೆಗೆ ಹೋಗಲು ಆಗದೇ ಅವಳ ಮನೆಗೆ ಹೋಗುವಾಗ ಅವಳಿಗೆ ಏನಾದರೂ ಉಡುಗೊರೆ ಕೊಳ್ಳೋಣವೆಂದು ಹೇಳುತ್ತಿರುವಾಗ ಗೆಳತಿಯೋರ್ವಳು ಸವಿತಾ  ಮಿಕ್ಸರ್‌ ಕೊಳ್ಳಬೇಕೆಂದು ಹೇಳಿದ ಸುದ್ದಿಯನ್ನು ಹೇಳಿದಾಗ ನಮಗೆ ಉಡುಗೊರೆ ಹುಡುಕುವ ಕೆಲಸ ತಪ್ಪಿತಲ್ಲ ಎಂದು ಖುಷಿಯಾಗಿ ಮಿಕ್ಸರ್‌ ಕೊಂಡು ಅವಳ ಮನೆಗೆ ಹೋದರೆ, ಸಾಂಬಾರಿಗೆ ಮಸಾಲೆ ರುಬ್ಬುವ ಶಬ್ದ ಕೇಳಿ ನಮ್ಮ ಮೋರೆ ಪೆಚ್ಚಾಯಿತು. “ನಿನ್ನೆ ಶಾಪಿಂಗ್‌ ಹೋಗಿ ಮಿಕ್ಸರ್‌ ಕೊಂಡೆವು’ ಎಂದಾಗ ಮಿಕ್ಸರನ ಸಲಹೆ ನೀಡಿದ ಗೆಳತಿಗೆ ಬಡಿಯುವಂತೆ ಎಲ್ಲರೂ ನೋಟ ಬೀರಿದರು.

ಪ್ರೀತಿ ಸಪ್ರೈìಸ್‌ ನೀಡಲು ಮೂಗು ಹಿಡಿದು ಆಕೆ ಮಾಡಿದ ಕರಿದ ಮೀನು ತಿನ್ನಲು ಅವಳ ಪತಿರಾಯರಿಗೆ  ಆ ದಿನ ಏಕಾದಶಿ ಒಪ್ಪತ್ತು. ಅದನ್ನು ಫ್ರಿಜ್ಜಿನಲ್ಲಿಟ್ಟು ಗಂಡ ಮಾರನೇ ದಿನ ತಿಂದ ಮೇಲೆ ಫ್ರಿಜ್ಜನ್ನು ಗೋಮೂತ್ರದಲ್ಲಿ ತೊಳೆದ ವಿಷಯ ಯಾರಿಗೆ ಗೊತ್ತು ಹೇಳಿ!

ಹೀಗೆ ಅನಿರೀಕ್ಷಿತ ಉಡುಗೊರೆಗಳನ್ನು ನೀಡಿ ಅನಿರೀಕ್ಷಿತ ಅನುಭವಗಳು ನಮಗೆ ಸಿಗುವುದು ಖಂಡಿತ. ಪ್ರತಿಯೊಬ್ಬರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರಿತು ಅನಿರೀಕ್ಷಿತ ಉಡುಗೊರೆಗಳನ್ನು ನೀಡಿದರೆ ಕೊಟ್ಟವರಿಗೂ ಪಡೆದವರಿಗೂ ಸಾರ್ಥಕತೆ. ಪ್ರೀತಿಯಿಂದ ಒಂದು ಸಣ್ಣ ಹೂವು ಕೊಟ್ಟರೂ ಸಾಕು. ಹೀಗೆ ಅನಿರೀಕ್ಷಿತ ಉಡುಗೊರೆಗಳನ್ನು ನೀಡಿ  ಪ್ರೀತಿಯಿಂದ ಬಾಳ್ಳೋಣವೇ?!

ಸಾವಿತ್ರಿ ಶ್ಯಾನುಭೋಗ್‌

Advertisement

Udayavani is now on Telegram. Click here to join our channel and stay updated with the latest news.

Next