Advertisement

ಇಂಧನ ಬೆಲೆ ಕಡಿಮೆ ವಿಚಾರ: ಪ್ರಧಾನಿಗೆ 5 ಪ್ರಶ್ನೆ ಕೇಳಿದ ಸುರ್ಜೇವಾಲಾ

04:12 PM Apr 27, 2022 | Team Udayavani |

ಬೆಂಗಳೂರು: ಇಂಧನದ ಮೇಲಿನ ರಾಜ್ಯಗಳ ತೆರಿಗೆ ಕಡಿಮೆ ಮಾಡುವಂತೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿರುಗೇಟು ನೀಡಿ 5  ಪ್ರಶ್ನೆಗಳನ್ನು ಕೇಳಿದ್ದಾರೆ.

Advertisement

ಪ್ರಧಾನಿಯವರು ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ. ರಾಜಸ್ತಾನ, ಛತ್ತೀಸ್ ಘಡ, ತಮಿಳುನಾಡು ಇನ್ನಿತರ ಬಿಜೆಪಿಯೇತರ ರಾಜ್ಯಗಳ ಬಗ್ಗೆ ಹೇಳಿದ್ದಾರೆ. ಪೆಟ್ರೋಲ್ ಬೆಲೆ ಕಡಿಮೆ ಮಾಡುವಂತೆ ಮಾತನಾಡಿದ್ದಾರೆ. ನಾನು ಐದು ಪ್ರಶ್ನೆಗಳನ್ನ ಮೋದಿಗೆ ಕೇಳುತ್ತೇನೆ ಎಂದಿದ್ದಾರೆ.

”ಭ್ರಷ್ಟಾಚಾರದ ಬಗ್ಗೆ ಮೊದಲು ಮಾತನಾಡಿ, ಪೆಟ್ರೋಲ್ ದರ ಇಳಿಕೆಗೆ ನಾವು ಒತ್ತಾಯಿಸಿದ್ದೆವು. ಪೆಟ್ರೋಲ್ ಮೇಲಿನ ಸೆಸ್ ಯಾವಾಗ ಕಡಿಮೆ ಮಾಡುತ್ತೀರಿ? ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟಿತ್ತು? ಈಗ ಎಷ್ಟಿದೆ? ಅದನ್ನು ಯಾವಾಗ ಕಡಿಮೆ ಮಾಡುತ್ತೀರಿ? 27 ಲಕ್ಷ ಕೋಟಿ ಸೆಸ್ ನಿಂದ ಸಂಗ್ರಹ ಮಾಡಲಾಗಿದೆ. ನೀವು ಅಧಿಕಾರಕ್ಕೆ ಬಂದಾಗಿನಿಂದ ಮಾಡಿದ್ದೀರಾ? ಗ್ಯಾಸ್ ಸಿಲಿಂಡರ್ ಬೆಲೆ 480 ರೂ ಇತ್ತು. ಈಗ ಗ್ಯಾಸ್ ಬೆಲೆ 1000 ರೂಗೆ ಬಂದಿದೆ.ಈದರ ಏರಿಕೆ ಸಾಮಾನ್ಯಜನರಿಗೆ ಹೊರೆಯಾಗಿದೆ. 150  ಕೋಟಿ ಇದರಲ್ಲಿ ಕಲೆಕ್ಟ್ ಮಾಡಲಾಗಿದೆ. ಸಬ್ಸಿಡಿಯನ್ನ ನೀವು ತೆಗೆದಿದ್ದೀರಿ, ಅದನ್ನ ಯಾವಾಗ ಕಡಿಮೆ ಮಾಡುತ್ತೀರಿ? ಕೆಲವು ರಾಜ್ಯಗಳು ತೆರಿಗೆಯನ್ನೇ ತೆಗೆದಿವೆ. ನೀವು ಯಾಕೆ ಕೇಂದ್ರದ ಸೆಸ್ ಕಡಿಮೆ ಮಾಡುತ್ತಿಲ್ಲ”ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಇಂಧನದ ಮೇಲಿನ ವ್ಯಾಟ್ ಕಡಿಮೆ ಮಾಡಿ: ವಿಪಕ್ಷಗಳ ಸಿಎಂಗಳಿಗೆ ಪ್ರಧಾನಿ ಚಾಟಿ

ನೂತನ ಕೆಪಿಸಿಸಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ, ಇವತ್ತು ಒಂದು ಉತ್ತಮ ಸಭೆಯಾಗಿದೆ. ರಾಷ್ಟ್ರೀಯ ವಿಷಯಗಳನ್ನ ಜನರಿಗೆ ಮುಟ್ಟಿಸುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next