Advertisement

ಸರ್ಜಿಕಲ್‌ ಸ್ಟ್ರೈಕ್‌ ವಿಡಿಯೋ ಬಹಿರಂಗ: ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

11:47 AM Jun 28, 2018 | Team Udayavani |

ಹೊಸದಿಲ್ಲಿ : 2016ರಲ್ಲಿ ಭಾರತೀಯ ಸೇನೆ ನಡೆಸಿದ್ದ ಪಿಓಕೆ ಮೇಲಿನ ಸರ್ಜಿಕಲ್‌ ಸ್ಟ್ರೈಕ್‌ ವಿಡಿಯೋವನ್ನು ಇದೀಗ ಬಹಿರಂಗಪಡಿಸುವ ಮೂಲಕ ಎನ್‌ಡಿಎ ಸರಕಾರ ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಆಳುವ ಪಕ್ಷದ ಈ ಹುನ್ನಾರವನ್ನು  ಬಲವಾಗಿ ಖಂಡಿಸಿದೆ. 

Advertisement

2016 ಸೆ.28 ಮತ್ತು 29ರ ನಡುವಿನ ರಾತ್ರಿ ಭಾರತೀಯ ಸೇನೆಯ ಎಲೈಟ್‌ ಪ್ಯಾರಾ ಕಮಾಂಡೋಗಳು ಪಿಓಕೆಯಲ್ಲಿನ ಉಗ್ರರ ತರಬೇತಿ ಶಿಬಿರಗಳ ಮೇಲೆ ನಡೆಸಿದ್ದ  ಸರ್ಜಿಕಲ್‌ ಸ್ಟ್ರೈಕ್‌ ದಾಳಿಯ ವಿಡಿಯೋವನ್ನು ಎನ್‌ಡಿಎ ಸರಕಾರ ಇಂದು ಬುಧವಾರ ಬಿಡುಗಡೆಗೊಳಿಸಿದೆ. ಇದು ದೇಶಾದ್ಯಂತ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ.  ವಿರೋಧ ಪಕ್ಷಗಳು ಕೇಂದ್ರ ಸರಕಾರ ಭಾರತೀಯ ಸೇನಾ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಟುವಾಗಿ ಟೀಕಿಸಿವೆ. 

ಆದರೆ ಆಳುವ ಭಾರತೀಯ ಜನತಾ ಪಕ್ಷದ ಎನ್‌ಡಿಎ ಸರಕಾರ ವಿಪಕ್ಷಗಳ ಈ ಆರೋಪವನ್ನು ತಿರಸ್ಕರಿಸಿದೆ. 

ಸರ್ಜಿಕಲ್‌ ಸ್ಟ್ರೈಕ್‌ ನಡೆದ 637 ದಿನಗಳ ಬಳಿಕ ಝೀ ಮಾಧ್ಯಮಕ್ಕೆ ದೊರಕಿರುವ ವಿಡಿಯೋ ಚಿತ್ರಿಕೆಯಲ್ಲಿ ಭಾರತೀಯ ಸೇನೆಯ ಎಂಟೆದೆಯ ಕಮಾಂಡೋಗಳು ಪಿಓಕೆಯಲ್ಲಿನ ಉಗ್ರ ಶಿಬಿರಗಳನ್ನು ನಾಶಪಡಿಸುವುದು, ವ್ಯಾಪಕ ನಾಶ ನಷ್ಟ ಉಂಟು ಮಾಡಿರುವುದು ಎಲ್ಲವೂ ಸ್ಪಷ್ಟವಾಗಿ ಕಂಡುಬಂದಿದೆ. 

ಈಗ ಈ ವಿಡಿಯೋ ಸಾರ್ವಜನಿಕವಾಗಿ ಲಭ್ಯವಾಗಿರುವುದನ್ನು ಕಾಂಗ್ರೆಸ್‌ ಟೀಕಿಸಿದೆ; ಪ್ರಧಾನಿ ನರೇಂದ್ರ ಮೋದಿ ಸರಕಾರ ಇದರ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. 

Advertisement

ರಾಷ್ಟ ರಾಜಧಾನಿಯಲ್ಲಿಂದು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ  ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್‌ಜೇವಾಲಾ ಅವರು “ಸೇನೆಯ ತ್ಯಾಗವನ್ನು ಆಳುವ ಪಕ್ಷ ಓಟು ಗಳಿಕೆಯ ಪರಿಕರವನ್ನಾಗಿ ಬಳಸಬಾರದು; ಸೈನಿಕರು ಆತ್ಮಾರ್ಪಣೆ ಮಾಡಿರುವುದನ್ನು ಮೋದೀಜಿ ವಿಜೃಂಭಣೆಗೆ ಬಳಸಲಾಗುತ್ತಿರುವುದು ಖಂಡನೀಯ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next