Advertisement

ಸಾಮಾಜಿಕ ಜಾಲ ತಾಣದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌!

02:51 AM Mar 15, 2019 | |

ಮಂಡ್ಯ: ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ  ತೀವ್ರ ವಾಗ್ಧಾಳಿ ನಡೆಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದೆಯೇ ಎಂಬ ಅನುಮಾನಗಳು ಮೂಡಿವೆ. ಸುಮಲತಾ ಪರ ಹಾಗೂ ಜೆಡಿಎಸ್‌ ವಿರುದಟಛಿ ಪೋಸ್ಟ್‌ ಹಾಕುವವರನ್ನೇ ಟಾರ್ಗೆಟ್‌ ಮಾಡಲಾಗುತ್ತಿದ್ದು, ಇದ್ದಕ್ಕಿದ್ದಂತೆ ಫೇಸ್‌ಬುಕ್‌ ಅಕೌಂಟ್‌ ಲಾಕ್‌ ಆಗುತ್ತಿದೆ. ನೆಟ್ಟಿಗರ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆಯೇ ಎಂಬ ಶಂಕೆಗಳು ಮೂಡಿವೆ. ಕೆಲವರು ಫೇಸ್‌ಬುಕ್‌ ಪೇಜ್‌ ಮೇಲೆ ಕಣ್ಣು ಬೀಳದಿರಲಿ ಎಂದು ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಫೇಸ್‌ಬುಕ್‌ ಪೇಜ್‌ಗೆ ಭದ್ರತೆ ಒದಗಿಸಿ “ನನ್ನ ಅಕೌಂಟ್‌ ಬಂದ್‌ ಆಗದೆ ಇರಲಿ’ ಎಂದು ಪೋಸ್ಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next