Advertisement

ವರ್ಗಾವಣೆ ಕಾಯ್ದೆಗೆ ಸರ್ಜರಿ

10:46 AM Oct 06, 2019 | mahesh |

ಬೆಂಗಳೂರು: ಐವತ್ತು ವರ್ಷ ದಾಟಿದ ಎಲ್ಲ ಮಹಿಳಾ ಶಿಕ್ಷಕಿಯರಿಗೆ ಹಾಗೂ 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ಕಾಯ್ದೆ ಯಲ್ಲಿ ಕಡ್ಡಾಯ ಎಂಬ ಪದವನ್ನು ತೆಗೆದು “ವಲಯ ವರ್ಗಾವಣೆ’ ಎಂದು ಪರಿ ಗಣಿಸು ವಂತೆ ಹಾಗೂ “ಸಿ’ ವಲಯ ದಲ್ಲಿ 15 ವರ್ಷ ಒಟ್ಟಿಗೆ ಅಥವಾ ಆಗಾಗ 15 ವರ್ಷ ಕೆಲಸ ಮಾಡಿದ ಶಿಕ್ಷಕರಿಗೆ “ಸಿ’ ವಲಯದಿಂದ ವಿನಾಯಿತಿ ನೀಡಲಾಗಿದೆ.

ಕೋರಿಕೆ ವರ್ಗಾವಣೆಯಲ್ಲಿ ವಿಚ್ಛೇದನ ಪಡೆದಿ ರುವ ಶಿಕ್ಷಕರಿಗೆ ವಿನಾಯಿತಿ ಇತ್ತು. ಆದರೆ ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ಇರ ಲಿಲ್ಲ. ಆದರೆ ಈಗ ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನ ಮಕ್ಕಳನ್ನು ಹೊಂದಿರುವ ಪೋಷಕರಿಗೆ ವಿನಾ ಯಿತಿ ಕೊಡಬೇಕೆಂಬ ಉದ್ದೇಶದಿಂದ ತಿದ್ದು ಪಡಿ ತರಲು ಚಿಂತನೆ ನಡೆಸಿರುವುದಾಗಿ ಸಚಿವರು ತಿಳಿಸಿದರು.

ತಿದ್ದುಪಡಿಯ ಪ್ರಮುಖಾಂಶಗಳು
– 2018-19ರಲ್ಲಿ ಕಡ್ಡಾಯ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಮುಂದಿನ ವರ್ಷ ವರ್ಗಾವಣೆ ಪ್ರಕ್ರಿಯೆಗೂ ಮೊದಲೇ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಅನುಸಾರವಾಗಿ ಒಂದು ಬಾರಿ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು.

– ಸಿ ವಲಯಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಹಾಗೂ ಕಡ್ಡಾಯ ವರ್ಗಾವಣೆಗಳನ್ನು ಮೊದಲು ತಾಲೂಕು ಹಂತದಲ್ಲಿ, ಅನಂತರ ನಗರ ಜಿಲ್ಲಾ ಹಂತದಲ್ಲಿ ಆದ್ಯತೆಗೆ ಅನುಗುಣವಾಗಿ ಮಾಡಲಾಗುವುದು.

Advertisement

– ಸಿ ವಲಯದ ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ಹಾಗೂ ಕಡ್ಡಾಯ ವರ್ಗಾವಣೆಗಳನ್ನು ಮೊದಲು ತಾಲೂಕು, ಬಳಿಕ ನಗರ ಜಿಲ್ಲೆ , ವಲಯವಾರು ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ.

– ಯಾವುದೇ ವಲಯದ ಶಿಕ್ಷಕರಿಗೆ ಇನ್ನು ಮುಂದೆ ಕೋರಿಕೆ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ.

– ಯಾವುದೇ ತಾಲೂಕಿನಲ್ಲಿ ಶೇ.20ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇದ್ದಲ್ಲಿ, ಅಂತಹ ತಾಲೂಕುಗಳ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಗೆ ಅವಕಾಶ ಇರಲಿಲ್ಲ. ಇದನ್ನು ಶೇ.25ಕ್ಕೆ ಏರಿಕೆ ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next