Advertisement

ಶಸ್ತ್ರಚಿಕಿತ್ಸೆಗೊಳಗಾದ ಹಾರ್ದಿಕ್‌ ಪಾಂಡ್ಯ

10:24 AM Oct 06, 2019 | Team Udayavani |

ಲಂಡನ್‌: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಲಂಡನ್‌ನಲ್ಲಿ ಬೆನ್ನಿನ ಕೆಳ ಭಾಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

“ನನಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ. ನಿಮ್ಮ ಆಶೀರ್ವಾದಿಂದ ನಾನು ಚೇತರಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗಳಿಗೆ ಆಭಾರಿಯಾಗಿದ್ದೇನೆ. ಶೀಘ್ರವೇ ಕ್ರಿಕೆಟಿಗೆ ಮರರುವೆ. ಅಲ್ಲಿ ತನಕ ನನ್ನನ್ನು ನೀವು ಮಿಸ್‌ ಮಾಡಿಕೊಳ್ಳುತ್ತೀರಿ’ ಎಂದು ಹಾರ್ದಿಕ್‌ ಪಾಂಡ್ಯ ಫೋಟೊ ಸಹಿತ ಟ್ವೀಟ್‌ ಮಾಡಿದ್ದಾರೆ. ಅವರು 5 ತಿಂಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಹಾರ್ದಿಕ್‌ಗೆ ಬೆನ್ನು ನೋವಿನ ಸಮಸ್ಯೆ ಕಾಡಿತ್ತು. ಹೀಗಾಗಿ ಟೆಸ್ಟ್‌ ಸರಣಿಯಿಂದಲೂ ಅವರು ದೂರ ಉಳಿಯಬೇಕಾಯಿತು. ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನೂ ಪಾಂಡ್ಯ ಕಳೆದುಕೊಳ್ಳುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next