Advertisement

Supreme Court: ಶಸ್ತ್ರಚಿಕಿತ್ಸೆ ಲೈವ್‌: ಕೇಂದ್ರ, ಎನ್‌ಎಂಸಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌

10:47 PM Oct 13, 2023 | Team Udayavani |

ನವದೆಹಲಿ: ವೈದ್ಯರು ನಡೆಸುವ ಶಸ್ತ್ರಚಿಕಿತ್ಸೆಯನ್ನು ಲೈವ್‌ ಆಗಿ ಪ್ರಸಾರ ಮಾಡುವ ಕುರಿತು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಮಂಡಳಿ(ಎನ್‌ಎಂಸಿ)ಯ ಪ್ರತಿಕ್ರಿಯೆಗಳನ್ನು ಬಯಸಿ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ದೆಹಲಿಯ ಕೆಲವು ನಿವಾಸಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ಶಸ್ತ್ರಚಿಕಿತ್ಸೆಯನ್ನು ಲೈವ್‌ ಆಗಿ ಪ್ರಸಾರದ ವೇಳೆ ಅನೇಕ ಕಾನೂನಾತ್ಮಕ ಮತ್ತು ನೈತಿಕ ಪ್ರಶ್ನೆಗಳು ಏಳುವುದರಿಂದ, ಈ ಕುರಿತು ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಂದ್ರ ಹಾಗೂ ಎನ್‌ಎಂಸಿಗೆ ಸೂಚಿಸಿದೆ.

Advertisement

“ಶಸ್ತ್ರಚಿಕಿತ್ಸೆಗಳನ್ನು ಲೈವ್‌ ಆಗಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಕೆಲವು ಜನರು ವೀಕ್ಷಿಸುತ್ತಿದ್ದಾರೆ ಮತ್ತು ಈ ಪ್ರಕ್ರಿಯೆ ಕುರಿತು ವೈದ್ಯರಿಗೆ ಪ್ರಶ್ನೆ ಕೇಳುತ್ತಾರೆ. ಇದು ಹೇಗೆಂದರೆ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುವ ಜತೆಗೆ ಅದೇ ಸಮಯದಲ್ಲಿ ಕಾಮೆಂಟರಿ ಮಾಡಿದಂತೆ. ಇದು ರೋಗಿಗಳ ಜೀವವನ್ನು ಅಪಾಯಕ್ಕೆ ತಳ್ಳಲಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ರೋಗಿಗಳನ್ನೇ ಇದಕ್ಕೆ ಬಳಸಲಾಗುತ್ತಿದೆ’ ಎಂದು ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಗೋಪಾಲ್‌ ಶಂಕರ್‌ನಾರಾಯಣನ್‌ ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next