Advertisement

Endoscope Operation: ಸ್ವಿಜರ್ಲೆಂಡ್‌ ನ‌ಲ್ಲಿ ಕುಳಿತೇ ಹಾಂಕಾಂಗ್‌ ನಲ್ಲಿ ಶಸ್ತ್ರಚಿಕಿತ್ಸೆ

09:01 PM Sep 10, 2024 | Team Udayavani |

ಜ್ಯುರಿಚ್‌: ವೈದ್ಯ ವಿಜ್ಞಾನದಲ್ಲಿ ಸಂಶೋಧಕರು ಮತ್ತೊಂದು ಸಾಹಸವನ್ನು ಮಾಡಿದ್ದಾರೆ. ಸ್ವಿಜರ್ಲೆಂಡ್‌ನ‌ ಜ್ಯೂರಿಚ್‌ನಲ್ಲಿ ಕುಳಿತುಕೊಂಡು 9,300 ಕಿ.ಮೀ. ದೂರದ ಹಾಂಕಾಂಗ್‌ ನಲ್ಲಿದ್ದ ಹಂದಿ ಮಾದರಿ ಮೇಲೆ ಟೆಲಿಆಪರೇಟೆಡ್‌ ಮ್ಯಾಗ್ನೆಟಿಕ್‌ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದಕ್ಕಾಗಿ ವಿಡಿಯೋ ಗೇಮ್‌ ಕಂಟ್ರೋಲರ್‌ ಬಳಸಿಕೊಂಡಿದ್ದಾರೆ!

Advertisement

ಸ್ವಿಜರ್ಲೆಂಡ್‌ನ‌ ಸ್ವಿಸ್‌ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಿಜಿ ಜ್ಯೂರಿಚ್‌ (ಇಟಿಎಚ್‌ ಜ್ಯುರಿಚ್‌) ಮತ್ತು ಚೀನಾದ ಯುನಿವರ್ಸಿಟಿ ಆಫ್ ಹಾಂಕಾಂಗ್‌ (ಸಿಯುಎಚ್‌ಕೆ) ವೈದ್ಯ ಬೋಧಕರು ಜಂಟಿಯಾಗಿ, ಹೊಸ ತಂತ್ರಜ್ಞಾನ ಬಳಸಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹಾಂಕಾಂಗ್‌ನ ಆಪರೇಷನ್‌ ರೂಮ್‌ನಲ್ಲಿ ವೈದ್ಯರು ಸಮ್ಮುಖದಲ್ಲಿ ಮತ್ತು ಜ್ಯೂರಿಚ್‌ನಲ್ಲಿದ್ದ ರಿಮೋಟ್‌ ಸ್ಪೆಷಲಿಸ್ಟ್‌ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಜ್ಯೂರಿಚ್‌ನಲ್ಲಿ ರಿಮೋಟ್‌ ಸ್ಪೆಷಲಿಸ್ಟ್‌ಗಳು ಶಸ್ತ್ರ ಚಿಕಿತ್ಸೆಗೆ ಗೇಮ್‌ ಕಂಟ್ರೋಲರ್‌ ಬಳಸಿಕೊಂಡಿದ್ದರು.

ಸೌಲಭ್ಯ ರಹಿತ ಪ್ರದೇಶಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಬಹುದು ಎಂಬುದು ಈ ಪ್ರಯೋಗದ ಉದ್ದೇಶವಾಗಿತ್ತು. ಮುಂದಿನ ಹಂತದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಸಿಯು ಮೆಡಿಸಿನ್‌ನ ಸಹಾಯಕ ಪ್ರೊಫೆಸರ್‌ ಡಾ. ಶನಾನ್‌ ಮೆಲಿಶಾ ಚಾನ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next