Advertisement

ಕೊರೊನಾ ಬಗ್ಗೆ ತಪ್ಪು ಮಾಹಿತಿ ನೀಡದಿರಿ: ಸುರೇಶ್‌ ರೈನಾ

09:28 AM Mar 19, 2020 | keerthan |

ಚೆನ್ನೈ: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ 19 ಸೋಂಕಿಗೆ ಸಂಬಂಧಪಟ್ಟಂತೆ ಜನರು ತಮ್ಮ ಅರಿವಿಗೆ ಬಾರದೆ ತಪ್ಪು ಮಾಹಿತಿಗಳನ್ನು ಎಲ್ಲೆಡೆ ಹರಡುತ್ತಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಸುರೇಶ್‌ ರೈನಾ ತಪ್ಪು ಮಾಹಿತಿಗಳನ್ನು ಫಾರ್ವರ್ಡ್‌ ಮಾಡದಂತೆ ಮನವಿ ಮಾಡಿದ್ದಾರೆ. “ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಸರಪಳಿಯನ್ನು ಮುರಿಯಲು ಸಮಾಜದಿಂದ ಪ್ರತ್ಯೇಕವಾಗಿ ಇರುವ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವಿಶ್ವಾಸಾರ್ಹವಲ್ಲದ ಮಾಹಿತಿಯನ್ನು ಹರಡಬೇಡಿ. ಆರೋಗ್ಯ ಸಲಹೆಗಾರರನ್ನು ನಿರ್ಲಕ್ಷಿಸಬೇಡಿ ಮತ್ತು ಶುಚಿತ್ವದ ಕ್ರಮಗಳನ್ನು ಖಂಡಿತವಾಗಿಯೂ ಅನುಸರಿಸಿ’ ಎಂದು ಸುರೇಶ್‌ ರೈನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next