Advertisement

ಕರ್ಸ್ಟನ್‌ ಭೇಟಿ ಮಾಡಿದ ರೈನಾ

03:45 AM Jul 06, 2017 | Team Udayavani |

ಹೊಸದಿಲ್ಲಿ: ಕ್ರಿಕೆಟಿಗ ಸುರೇಶ್‌ ರೈನಾ ಟೀಮ್‌ ಇಂಡಿಯಾ ತಂಡಕ್ಕೆ ಮರಳಲು ಬಹಳಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಸಿಕ್ಕ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ.

Advertisement

ಪತ್ನಿ ಪ್ರಿಯಾಂಕಾ ಜತೆ ಹಾಲೆಂಡ್‌ನ‌ಲ್ಲಿ ವಿಶ್ರಾಂತಿ ಪಡೆಯುತ್ತಿರುವ ರೈನಾ ಪೂರ್ಣ ಫಿಟ್‌ನೆಸ್‌ ಪಡೆಯಲು ಸತತ ಅಭ್ಯಾಸ, ವ್ಯಾಯಾಮ  ನಡೆಸುತ್ತಿದ್ದಾರೆ. ಇದರ ನಡುವೆ ಆಶ್ಚರ್ಯವೆಂಬಂತೆ ಹಾಲೆಂಡಿನ ಅಂಡರ್‌-17 ತಂಡಕ್ಕೆ ಮೂರು ದಿನ ತರಬೇತಿ ನೀಡುತ್ತಿರುವ ಭಾರತೀಯ ತಂಡದ ಮಾಜಿ ಕೋಚ್‌ ಗ್ಯಾರಿ ಕರ್ಸ್ಟನ್‌ ಅವರನ್ನು ರೈನಾ ಭೇಟಿ ಮಾಡಿ ಸಲಹೆ ಕೇಳಿದ್ದಾರೆ. ಈ ಸಂಬಂಧ ಕ್ರಿಕೆಟ್‌ ಹಾಲೆಂಡ್‌ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಪ್ರಕಟಿಸಿದೆಯಲ್ಲದೇ ಹಾಲೆಂಡಿನ ಅಂಡರ್‌-17 ತಂಡದ ಬಾಲಕರಿಗೆ ಮೂರು ದಿನಗಳ ತರಬೇತಿಗಾಗಿ ಗ್ಯಾರಿ ಕರ್ಸ್ಟನ್‌ ಮರಳಿದ್ದಾರೆ. ಆಶರ್ಯವೆಂಬಂತೆ ರೈನಾ ಈ ವೇಳೆ ಭೇಟಿ ನೀಡಿದ್ದಾರೆ ಎಂದು ಬರೆದಿದೆ.

ವಿಶ್ವಕಪ್‌ ವಿಜೇತ ಕೋಚ್‌ ಅವರನ್ನು ಭೇಟಿ ಮಾಡಿದ್ದ ಬಳಿಕ ರೈನಾ ಕೂಡ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸೂಪರ್‌ ಟಾಲೆಂಟೆಡ್‌ ವ್ಯಕ್ತಿ ಜತೆ ಅಭ್ಯಾಸ ನಡೆಸುವುದು ತುಂಬಾ ಖುಷಿ ನೀಡಿದೆ. ಕರ್ಸ್ಟನ್‌ ಅವರಿಂದ ಯಾವಾಗಲೂ ಕಲಿಯಲು ಬಹಳಷ್ಟು ಇದೆ ಎಂದು ರೈನಾ ಬರೆದಿದ್ದಾರೆ.

ಗ್ಯಾರಿ ಕರ್ಸ್ಟನ್‌ 2008ರಿಂದ 2011ರ ವರೆಗೆ ಟೀಮ್‌ ಇಂಡಿಯಾದ ಕೋಚ್‌ ಆಗಿದ್ದರು ಮತ್ತು 2011ರಲ್ಲಿ ವಾಂಖೇಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾವನ್ನು ಸೋಲಿಸಿ ಐಸಿಸಿ ವಿಶ್ವಕಪ್‌ ಗೆದ್ದ ಬಳಿಕ ಕರ್ಸ್ಟನ್‌ ಅವರ ಕೋಚ್‌ ಅವಧಿ ಮುಗಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next