Advertisement

ಮೈದಾನಕ್ಕೆ ಲಗ್ಗೆಯಿಟ್ಟ ರೈನಾ ಅಭಿಮಾನಿ

12:35 AM May 12, 2017 | Karthik A |

ಕಾನ್ಪುರ: ಸುರೇಶ್‌ ರೈನಾ ಮುಂಬರುವ ಚಾಂಪಿಯನ್ಸ್‌ ಟ್ರೋಫಿಗೆ ಆಯ್ಕೆಯಾಗದೇ ಇರಬಹುದು ಅಥವಾ ಐಪಿಎಲ್‌ನಲ್ಲಿ ಅವರ ನಾಯಕತ್ವದ ಗುಜರಾತ್‌ ಲಯನ್ಸ್‌ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗದಿರಬಹುದು. ಆದರೆ ಅವರಿನ್ನೂ ಅಪಾರ ಅಭಿಮಾನಿಗಳನ್ನು ಹೊಂದಿರುವುದಂತೂ ನಿಜ. 

Advertisement

ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದ ವೇಳೆ ಇದು ಸಾಬೀತಾಯಿತು. ಡೆಲ್ಲಿ ತಂಡ ರನ್‌ ಚೇಸ್‌ ಮಾಡುತ್ತಿರುವ ವೇಳೆ ಕಾನ್ಪುರದ ಗ್ರೀನ್‌ ಪಾರ್ಕ್‌ ಕ್ರೀಡಾಂಗಣಕ್ಕೆ ಪ್ರವೇಶಿಸಿದ ಅಭಿಮಾನಿಯೊಬ್ಬ ನೇರವಾಗಿ ರೈನಾ ಹತ್ತಿರ ಸಾಗಿದ. ರೈನಾ ಎಂದು ಬರೆದಿರುವ ಟಿ-ಶರ್ಟ್‌ ಧರಿಸಿದ್ದ ಅಭಿಮಾನಿ ಕ್ರಿಕೆಟ್‌ ದೇವನೆದುರು ಮಂಡಿಯೂರಿ ಆಟೋಗ್ರಾಫ್ ನೀಡುವಂತೆ ಬೇಡಿಕೊಂಡ. ಅಭಿಮಾನಿಯ ಈ ಪ್ರೀತಿಗೆ ರೈನಾ ಆಶ್ಚರ್ಯಗೊಂಡರು. ರೈನಾ ಕೈ ಕುಲುಕಿದ ಅಭಿಮಾನಿ ಭದ್ರತಾ ಸಿಬಂದಿ ಸ್ಥಳಕ್ಕೆ ಬರುವ ಮೊದಲೇ ಮೈದಾನ ತೊರೆದಿದ್ದ. ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಸುರೇಶ್‌ ರೈನಾ ಅಲ್ಲಿನ ಜನಪ್ರಿಯ ಕ್ರಿಕೆಟಿಗರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next