Advertisement

ಒಂದೆರಡು ದಿನದಲ್ಲಿ 1 ರಿಂದ 9 ತರಗತಿ ಪರೀಕ್ಷೆ ಬಗ್ಗೆ ನಿರ್ಧಾರ: ಸುರೇಶ್ ಕುಮಾರ್

11:24 AM Apr 16, 2021 | Team Udayavani |

ಹನೂರು (ಚಾಮರಾಜನಗರ): ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಸಂಬಂಧ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು

Advertisement

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಎಸ್ಎಸ್ಎಲ್ಸಿ ಪರೀಕ್ಷೆಗೆ 2 ತಿಂಗಳು 1 ವಾರ ಕಾಲಾವಕಾಶ ಇದ್ದು ಪರಿಸ್ಥಿತಿ ಅವಲೋಕಿಸಿ ಸೂಕ್ತ ಸಂಧರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಕಳೆದ ವರ್ಷದಂತೆ ಮಾರ್ಗಸೂಚಿ ನೀಡುವಂತೆ ಆರೋಗ್ಯ ಇಲಾಖೆಗೂ ಮನವಿ ಮಾಡಲಾಗಿದೆ ಎಂದರು.

1 ರಿಂದ 9 ತರಗತಿ ಪರೀಕ್ಷೆ ಸಂಬಂಧ ಮಾತನಾಡಿ, ಈಗಾಗಲೇ 1-5 ಮತ್ತು 6-9 ತರಗತಿಗಳ ಬಗ್ಗೆ 2 ವಿಭಾಗದಲ್ಲಿ ಚರ್ಚೆ ನಡೆಸಲಾಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next