Advertisement

ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ತಿಂದ ಊಟ ಜೀರ್ಣ ಆಗಲ್ಲ

09:51 AM Oct 14, 2019 | keerthan |

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರ ಬಗ್ಗೆ ನನಗೆ ಬಹಳ ಕನಿಕರ ಇದೆ. ಅವರ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್‌ಗಾಂಧಿ ತರಹ ಪ್ರತಿಯೊಂದು ವಿಚಾರದಲ್ಲಿಯು ಕೂಡ ಆರ್‌ಎಸ್‌ಎಸ್ ಎಳೆಯದೇ ಇದ್ದರೆ ಊಟ ಮಾಡಿದ್ದು ಜೀರ್ಣ ಆಗುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಕಾರ್ಯಕಲಾಪಮಗಳಿಗೆ ಮಾಧ್ಯಮಗಳನ್ನು ನಿರ್ಬಂಧಿಸಿರುವುದು ಸ್ಪೀಕರ್ ಅವರ ವೈಯಕ್ತಿಕ ತಿರ್ಮಾನವಲ್ಲ. ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಸ್ಪೀಕರ್‌ಗಳ ಅಧಿವೇಶದಲ್ಲಿ ಕೈಗೊಂಡ ನಿರ್ಣಯ ಹಾಗೂ ಸಂಸತ್ತು ಮಾದರಿಯಲ್ಲಿಯೆ ಅವರು ನಿರ್ಧಾರ ತೆಗೆದು ಕೊಂಡಿದ್ದಾರೆಂದರು. ಸಿದ್ದರಾಮಯ್ಯ, ಸ್ಪೀಕರ್ ಆ ಸ್ಥಾನಕ್ಕೆ ಯಾವ ರೀತಿ ಗೌರವ ಕೊಡುತ್ತಾರೆ ಎಂಬುದನ್ನು ನಿನ್ನೆ ಮೊನ್ನೆ ನಡೆದ ಅಧಿವೇಶನದಲ್ಲಿಯೆ ಇಡೀ ರಾಜ್ಯದ ಜನತೆ ನೋಡಿದ್ದಾರೆ. ಒಬ್ಬ  ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಬಹಳ ಕ್ಷುಲ್ಲಕ ಅಪಾದನೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ಬಂದು ನಿಂತಿದ್ದಾರೆಂದರು.

ಪರಮೇಶ್ವರ್ ಅಪ್ತ ರಮೇಶ್ ಆತ್ಮಹತ್ಯೆ ಬಗ್ಗೆ ನಮಗೆ ನಿಜವಗಾಲೂ ಸಾಕಷ್ಟು ದುಃಖ, ಬೇಸರ ಆ ಕುಟುಂಬ ಪರಿಸ್ಥಿತಿಯನ್ನು ನೋಡಿ ನಮಗೆ ವೇದನೆ ಆಗಿದೆ. ಯಾವ ಹಿನ್ನಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಸ್ವತಃ ಪರಮೇಶ್ವರ್ ರವರೇ ಐಟಿ ದಾಳಿಗೂ ರಾಜಕೀಯ ಬಣ್ಣ ಬೆರೆಸಬೇಡಿ ಎಂದು ಹೇಳಿಕೆ ನೀಡಿದ್ದಾರೆಂದರು.

ಡಾ.ಪರಮೇಶ್ವರ್ ರವರ ಹೇಳಿಕೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರ ಟೀಕೆಗೆ ಸರಿಯಾದ ಸ್ಪಷ್ಟ ಉತ್ತರ ಸಿಕ್ಕಿದೆ ಎಂದರು. ಐಟಿ ದಾಳಿ ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ನಡೆಯುತ್ತಿದೆಯೆಂಬ ಆರೋಪ ಕೇವಲ ಆರೋಪವಾಗಿದೆ. ಈ ಹಿಂದೆ ಕೂಡ ಬಿಜೆಪಿ ಸಂಸದರ ಮನೆ ಮೇಲೆಯೆ ಐಟಿ ದಾಳಿ ಆಗಿರುವುದು ನಾವೆಲ್ಲ ನೋಡಿದ್ದೇವೆಂದರು. ಯಾವ ಆಧಾರದಲ್ಲಿ ಅವರಿಗೆ ಮಾಹಿತಿ ಸಿಕ್ಕುತ್ತದೆಯೋ ಆ ರೀತಿ ಅವರು ದಾಳಿ ಮಾಡುತ್ತಾರೆ. ಐಟಿ ದಾಳಿಗೂ ಸರ್ಕಾರಕ್ಕೂ ಯಾವುದೇ ಸಂಬಂದ ಇಲ್ಲ ಎಂದರು. ಈಗಾಗಲೇ ಹಿಂದೆ ಮಾಧ್ಯಮಗಳ ಮೂಲಕ ಮೂಲಕವೇ ವೈದ್ಯಕೀಯ ಸೀಟುಗಳ ಅಕ್ರಮದ ಬಗ್ಗೆ ಸಾಕಷ್ಟು ಮಾಹಿತಿ ಬಂದಿದೆ.  ಅದರೆ ಇದರ ಪರಿಣಾಮ, ಫಲಿತಾಂಶವನ್ನು ಕಾದು ನೋಡಬೇಕಿದೆ ಎಂದರು. ಆದರೆ ಐಟಿ ದಾಳಿಗೂ ಕೇಂದ್ರ ಸರ್ಕಾರಕ್ಕೆ, ಕೇಂದ್ರ ಹಣಕಾಸು ಸಚಿವರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟವಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next