ಹುಣಸೂರು: ತಾಲ್ಲೂಕಿನ ಆಸ್ವಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್(ಮಹದೇವಪ್ಪ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್(ಮಹದೇವಪ್ಪ) ಹೊರತುಪಡಿಸಿ ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ನೋಡಲ್ ಅಧಿಕಾರಿ ಸಿ.ಡಿ.ಸಿ ಗಿರೀಶ್ ತಿಳಿಸಿದರು.
ನೂತನ ಅಧ್ಯಕ್ಷ ಸುರೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಸದಸ್ಯರಿಗೆ ಆರೋಗ್ಯವಿಮೆ ಬಗ್ಗೆ ಜಾಗೃತಿ ಮೂಡಿಸಿ, ವಿಮೆ ಮಾಡಿಸಲಾಗುವುದು, ಪ್ರತಿ ಸದಸ್ಯರಿಗೂ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಅರಿವೂ ಮೂಡಿಸಲಾಗುವುದು. ನಮ್ಮ ಸಹಕಾರ ಸಂಘವನ್ನೂ ಇನ್ನಷ್ಟೂ ಅಭಿವೃದ್ದಿಪಡಿಸಿ, ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲು ಪ್ರಯತ್ನ ಮಾಡಲಾಗುವುದು. ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೆಂಪೇಗೌಡ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿಸುರೇಶ್, ಸದಸ್ಯ ರಮೇಶ್, ಮಾ.ಸದಸ್ಯ ಸಂಪತ್‌ರಾಜ್, ಹಾ.ಉ.ಸಂ.ನಿರ್ಧೇಶಕರಾದ ನಾಗರಾಜು, ಕಾಳಿಂಗೇಗೌಡ, ಈರಯ್ಯ, ಶುಭಮಂಗಳ, ಹೊಂಗಯ್ಯ. ಮುಂಖಡರಾದ ಸಿದ್ದೇಗೌಡ, ಶಿವರಾಜು, ರುದ್ರೇಗೌಡ, ಹಾಗೂ ಆಸ್ವಾಳು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆಶಾ ಹಾಜರಿದ್ದರು.