Advertisement
ಪ್ರತಿಯೊಂದು ರಸ್ತೆಯಲ್ಲೂ ಹತ್ತಾರು ಬೀದಿ ನಾಯಿಗಳು ಕಂಡು ಬರುತ್ತಿವೆ. ಜತೆಗೆ ಹೆಚ್ಚಿನ ವರು ಸಾಕು ನಾಯಿಗಳನ್ನೂ ಬೀದಿಯಲ್ಲೇ ಬಿಡುತ್ತಾರೆ. ಹೀಗಾಗಿ ಮನುಷ್ಯರು ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಇದ ರಿಂದ ಶಾಲೆಗೆ ಹೋಗುವ ಮಕ್ಕಳನ್ನು ಓಡಿಸು ವುದು, ಸ್ಕೂಟರ್ ಸವಾರರ ಮೇಲೆ ದಾಳಿ, ಬೆನ್ನ ಟ್ಟುವ ಘಟನೆಗಳು ಹೆಚ್ಚುತ್ತಿವೆ.
ಬೈಕಂಪಾಡಿ ರಾ. ಹೆದ್ದಾರಿಯಲ್ಲಿ, ಸಮುದ್ರ ತೀರ ಹೀಗೆ ವಿವಿಧೆಡೆ ಬೀದಿ ಶ್ವಾನಗಳ ಹಿಂಡೇ ಕಾಣ ಸಿಗುತ್ತದೆ. ಅಡ್ಡ ಬರುವ ಬೀದಿ ಶ್ವಾನಗಳಿಂದಾಗಿ ದ್ವಿಚಕ್ರ ಸವಾರರು ಅಪಘಾತದಲ್ಲಿ ಸಿಲುಕಿ ಒದ್ದಾಟ ಅನುಭವಿಸುತ್ತಿದ್ದು, ಅಂಗವೈಕಲ್ಯಕ್ಕೂ ತುತ್ತಾಗುತ್ತಿದ್ದಾರೆ. ವಿವಿಧ ಠಾಣೆಯಲ್ಲಿ ಪ್ರಕರಣ ಪರಿಶೀಲಿಸಿದರೆ ಶ್ವಾನದಿಂದಾಗಿಯೇ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದವರ, ಸ್ಕೂಟರ್ ಪಲ್ಟಿಯಾಗಿ ಗಾಯಗೊಂಡ ಬಗ್ಗೆ ವರದಿಗಳು ಸಿಗುತ್ತಿವೆ.
Related Articles
ಕಾಟಿಪಳ್ಳದ ತ್ಯಾಜ್ಯ ರಾಶಿಯೊಂದರ ಬಳಿ ನಿತ್ಯವೂ ಕಾಣ ಸಿಗುವ ಎಂಟತ್ತು ಬೀದಿ ನಾಯಿಗಳು ಕಟ್ಟಿ ಹಾಕಿದ್ದ ದನವನ್ನು ಕಚ್ಚಿ ಕೊಂದು ಹಾಕಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ತ್ಯಾಜ್ಯವನ್ನು ವಿಲೇವಾರಿ ಮಾಡಿದ ಬಳಿಕ ಶ್ವಾನಗಳಿಗೆ ಆಹಾರ ಸಿಗದೇ ಹೋದ ಸಂದರ್ಭ ದನದ ಮೇಲೆರಗಿ ಕೊಂದು ಹಾಕಿದ್ದಲ್ಲದೆ ಮಾಂಸ ಭಕ್ಷಣೆಗೆ ಯತ್ನಿಸಿರುವ ಆತಂಕದ ಘಟನೆ ಇದಾಗಿದೆ.
Advertisement
ಮಾಜಿ ಕಾರ್ಪೋರೇಟರ್ ಮೇಲೆಯೇ ದಾಳಿಉರ್ವ ಮೈದಾನ ಪರಿಸರ ಸುತ್ತಮುತ್ತಲಿನ ಬಡಾವಣೆಯಲ್ಲಿ ಬೀದಿನಾಯಿ ಕಾಟ ವಿಪರೀತವಾಗಿದೆ. ಇತ್ತೀಚೆಗೆ ಮಾಜಿ ಮನಪಾ
ಸದಸ್ಯರೊಬ್ಬ ರು ಸ್ಕೂಟರ್‌ನಲ್ಲಿ ತೆರಳುವಾಗ ನಾಯಿ ದಾಳಿ ನಡೆಸಿದೆ. ಸ್ಕೂಟರ್ ನಿಂದ ಬಿದ್ದು ಗಾಯಗೊಂಡ ಅವರಿಗೆ ಚುಚ್ಚುಮದ್ದು ಸಹಿತ 1 ವಾರ ವಿಶ್ರಾಂತಿಗೆ ಸೂಚಿಸಲಾಗಿತ್ತು. ಇದೀಗ ಅವರು ಜಿಲ್ಲಾಧಿಕಾರಿಗೆ ಪ್ರಕರಣದ ಗಂಭೀರತೆ ಕುರಿತು ಪತ್ರ ಬರೆದು ಗಮನ ಸೆಳೆದಿದ್ದಾರೆ. ತಡೆಯುವವರು ಯಾರೂ ಇಲ್ಲ
ಬೀದಿ ನಾಯಿಗಳಿಂದ ದಾಳಿಯಾದಾಗ ಯಾರೂ ಇರುವುದಿಲ್ಲ. ನಾಯಿಗಳಿಗೆ ಸಮಸ್ಯೆಯಾದಾಗ ಕೇಳಲು ಹಲವರು ಮುಂದೆ ಬರುತ್ತಾರೆ ಎನ್ನು ವುದು ನಾಗರಿಕರ ಆಕ್ರೋಶ. ಪ್ರತಿ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.
ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಾತ್ರ ಅವುಗಳ ಸಂಖ್ಯೆ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ನಾಗರಿಕರು. ಬೀದಿ ಶ್ವಾನಗಳ ನಿಯಂತ್ರಣಕ್ಕೆ ಪಾಲಿಕೆ ಬದ್ಧ
ಬೀದಿ ಶ್ವಾನಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಬದ್ಧವಾಗಿದೆ. ಸಂತಾನ ಶಕ್ತಿಹರಣ ಚಿಕಿತ್ಸೆಗೆ ಬೇಕಾದ ಕ್ರಮವನ್ನೂ ಕೈಗೊಳ್ಳುತ್ತಿದೆ. ಕಾನೂನಿನ ಅಡಿಯಲ್ಲಿ ಬೇಕಾದ ಉಪಕ್ರಮ ವನ್ನು ಚುರುಕುಗೊಳಿಸಲು ಇದಕ್ಕಾಗಿ 25 ಲಕ್ಷ ರೂ. ಅನುದಾನ ಒದಗಿಸಲಾಗುವುದು.
– ಸುಧೀರ್ ಶೆಟ್ಟಿ ಕಣ್ಣೂರು,
ಮೇಯರ್, ಮಹಾನಗರ ಪಾಲಿಕೆ