ಸುರತ್ಕಲ್: ಸುರತ್ಕಲ್ ಸಮೀಪದ ಸಮುದ್ರ ತೀರದ ಗುಡ್ಡೆಕೊಪ್ಲ ಗ್ರಾಮದ ಮಹಿಳೆಯೋರ್ವರಿಗೆ(58) ಕೋವಿಡ್-19 ಸೋಂಕು ದೃಢಪಟ್ಟಿದೆ.ಕಾಲು ನೋವಿನಿನ ಚಿಕಿತ್ಸೆಗೆ ಮೇ 12ರಂದು ಸುರತ್ಕಲ್ ಖಾಸಗೀ ಆಸ್ಪತ್ರೆಗೆ ಮದ್ದಿಗೆ ಹೋಗಿದ್ದರು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಅದೇ ದಿನ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.ಕಾಲು ನೋವಿನ ಜತೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದೀಗ ಚಿಕಿತ್ಸೆ ಆರಂಭಿಸಲಾಗಿದೆ. ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಪರೀಕ್ಷಿಸಲಾಗುತ್ತಿದೆ. ತಂಗಿ ಮನೆಯಲ್ಲಿ ವಾಸವಿರುವ ಮಹಿಳೆ ತನ್ನ ಮೀನು ಮಾರುವ ವೃತ್ತಿಯನ್ನು ಬಹಳ ವರ್ಷದ ಹಿಂದೆಯೇ ತ್ಯಜಿಸಿ ಮನೆಯಲ್ಲಿದ್ದರು. ಅವರ ಕುಟುಂಬ ವರ್ಗ ಸುರತ್ಕಲ್ ,ಹಳೆಯಂಗಡಿ ಸುತ್ತಮುತ್ತಇದ್ದು ವೈದ್ಯರು ಮಾಹಿತಿ ಪಡೆಯುತ್ತಿದ್ದಾರೆ.
ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಗುಡ್ಡೆಕೊಪ್ಲದ ಸೋಂಕಿತೆಯ ಮನೆ ವ್ಯಾಪ್ತಿಯ ಒಂದು ಕಿ.ಮೀ ಪ್ರದೇಶದಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಇಡ್ಯಾ ಗ್ರಾಮವನ್ನು ಕಂಟೋನ್ಮೆಂಟ್ ಗುರುತಿಸಲಾಗಿದ್ದು 7907 ಮನೆಗಳು, 2144 ಅಂಗಡಿ, ಆಫೀಸು, ಒಟ್ಟು 17,382 ಜನಸಂಖ್ಯೆ ಹೊಂದಿದೆ.
ಉತ್ತರದಲ್ಲಿ ಸದಾಶಿವ ಮಹಾಗಣಪತಿ ದೇವಸ್ಥಾನ ರಸ್ತೆಯಿಂದ ದಕ್ಷಿಣದಲ್ಲಿ ಹೊಸಬೆಟ್ಟು ಗ್ರಾಮದ ಗಡಿ ಭಾಗದವರೆಗೆ, ಪಶ್ಚಿಮದ ಸುಮದ್ರ ತೀರದಿಂದ ಪೂರ್ವದ ಹೆದ್ದಾರಿ 66ರವರೆಗೆ ಕಂಟೋನ್ಮೆಂಟ್ ಏರಿಯಾ ಗುರುತಿಸಿ ಭದ್ರತೆಗಾಗಿ ತಗಡು ಶೀಟ್ ಅಳವಡಿಸಿ ,ಜನಸಂಚಾರ ನಿರ್ಭಂದಿಸಲು ಬ್ಯಾರಿಕೇಡ್ ಅಳವಡಿಸಲಾಗಿದೆ.