Advertisement
ಸುರತ್ಕಲ್ ಜಂಕ್ಷನ್‌ನಲ್ಲಿ ಹೊಂಡ ವಾದರೂ ಪಾಲಿಕೆ ದುರಸ್ತಿಗೆ ಮುಂದಾ ಗಿಲ್ಲ. ಹೆದ್ದಾರಿ ಇಲಾಖೆಯ ಅಧಿಧೀನದಲ್ಲಿ ಈ ರಸ್ತೆ ಇದ್ದರೂ ಅದು ನಿರ್ಲಕ್ಷ್ಯ ತಳುತ್ತಿದೆ. ಇದರಿಂದ ದಿನೇ ದಿನೇ ಹೊಂಡಗಳು ಕೆರೆಗಳಾಗಿ ಮಾರ್ಪಾ ಡಾಗುತ್ತಿದ್ದು, ದ್ವಿಚಕ್ರ ಸವಾರರು ಎದ್ದು ಬಿದ್ದು ಹೋಗುವ ಪ್ರಮೇಯ ಉಂಟಾಗಿದೆ. ತಿರುವುಗಳಲ್ಲಿ ರಸ್ತೆ ಬೇಗ ಕೆಟ್ಟು ಹೋಗುತ್ತಿದ್ದು ಘನ ವಾಹನಗಳ ಓಡಾಟವೂ ಅತಿಯಾಗಿರುವುದು ಕಾರಣ. ಶಾಸಕ ಡಾ| ಭರತ್ ಶೆಟ್ಟಿ ವೈ. ಸೆ. 3ರಂದು ಹೆದ್ದಾರಿಯಲ್ಲಿನ ಬೃಹತ್ ಹೊಂಡ ಮುಚ್ಚಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೆ ಅ ಧಿಕಾರಿಗಳು ಇನ್ನೂ ಆರಂಭಿಸುವ ಸೂಚನೆ ಕಾಣುತ್ತಿಲ್ಲ.
ಇತ್ತ ಘನ ಲಾರಿಗಳು ಹೊಂಡಕ್ಕೆ ಬಿದ್ದು ಕೆಟ್ಟು ನಿಲ್ಲುತ್ತಿದ್ದು, ಇದು ಮತ್ತಷ್ಟು ಟ್ರಾಫಿಕ್ ಬ್ಲಾಕ್‌ಗೆ ಕಾರಣವಾಗುತ್ತಿವೆ. ಸುರತ್ಕಲ್ ಕೊಟ್ಟಾರಚೌಕಿ ಓಡಾಟ ಹದಿನೈದು ನಿಮಿಷಗಳ ಪ್ರಯಾಣವಾದರೆ ಇದೀಗ ಬ್ಲಾಕ್‌ನಿಂದಾಗಿ ಕನಿಷ್ಠ ಮುಕ್ಕಾಲು-ಒಂದು ಗಂಟೆ ವಿಳಂಬವಾಗುತ್ತಿದೆ. ಮಳೆ ನೀರು ಹೊಂಡದಲ್ಲಿ ನಿಂತಿರುವುದರಿಂದ ದ್ವಿಚಕ್ರ ವಾಹನ ಸಂಚಾರ ಕಷ್ಟಕರ. ಇನ್ನಾದರೂ ಹೆದ್ದಾರಿ ಇಲಾಖೆ ಪ್ರಮುಖ ಮೂರು ಬೃಹತ್ ಹೊಂಡ ಇರುವಲ್ಲಿ ಕಾಂಕ್ರೀಟ್ ಹಾಕಿ ಮತ್ತಷ್ಟು ಸಮಸ್ಯೆ ಉಂಟಾಗುವುದನ್ನು ತಪ್ಪಿಸಬೇಕಿದೆ. ತುರ್ತು ದುರಸ್ತಿ ಮಾಡಿ
ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರಾ ಕೆಟ್ಟು ಹೋದ ಕಡೆ ತುರ್ತು ದುರಸ್ತಿಗೆ ಸೂಚಿಸಿದ್ದೇನೆ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅ ಧಿಕಾರಿಗಳು ಈ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು.
– ಡಾ| ಭರತ್ ಶೆಟ್ಟಿ ವೈ. ಶಾಸಕ