ಸುರತ್ಕಲ್ : ಸುರತ್ಕಲ್ 3ನೇ ಬ್ಲಾಕ್ ನಿವಾಸಿ, ಮಣಪ್ಪುರಂ ಫೈನಾನ್ಸ್ ಉದ್ಯೋಗಿಯಾಗಿದ್ದ ಶಿವಾನಿ (20) ಜ. 16ರಂದು ಕೆಲಸಕ್ಕೆ ಹೋದವರು ಮನೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.
Advertisement
ಸಂಸ್ಥೆಯ ಇತರ ಸಿಬಂದಿಗಳಲ್ಲಿ ವಿಚಾರಿಸಿದಾಗ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.