Advertisement

ರವಿವಾರ, ಬುಧವಾರ ಎರಡು ದಿನ ಸಂತೆಗೆ ಹಕ್ಕೊತ್ತಾಯ

05:24 AM Feb 10, 2019 | |

ಸುರತ್ಕಲ್‌ : ಇಂಟೆಕ್‌ ಸಂಘಟನೆಯ ಸುರತ್ಕಲ್‌ ಸಂತೆ ವ್ಯಾಪಾರಸ್ಥರ ಒಕ್ಕೂಟದ ಪ್ರಥಮ ಸಮ್ಮೇಳನ ನಗರದಲ್ಲಿ ಶುಕ್ರವಾರ ಜರಗಿತು.

Advertisement

ಮೇಯರ್‌ ಕೆ. ಭಾಸ್ಕರ ಉದ್ಘಾಟಿಸಿ, ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಸಂತೆ ವ್ಯಾಪಾರ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಒಂದೇ ಸೂರಿನಡಿ ನಿತ್ಯದ ಬಳಕೆಯ ವಸ್ತುಗಳು ಸಿಗುತ್ತವೆ. ಈಗಲೂ ಸಂತೆ ವ್ಯಾಪಾರ ಮುಂದುವರೆದಿದೆ. ಸುರತ್ಕಲ್‌ನಲ್ಲಿ ರವಿವಾರ ಮತ್ತು ಬುಧವಾರ ಸಂತೆ ವ್ಯಾಪಾರ ನಡೆಸಲು ವ್ಯವಸ್ಥೆ ಮಾಡಲಾಗುವುದು. ಪರಿಸರವನ್ನು ಶುಚಿಯಾಗಿ ಇಟ್ಟುಕೊಂಡು ವ್ಯಾಪಾರಿ ಗಳು ಜನರಿಗೆ ತೊಂದರೆಯಾಗದಂತೆ ನಡೆಸಿಕೊಂಡು ಬರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸರಕಾರ ಉತ್ತಮ ಸೌಲಭ್ಯ ಕಲ್ಪಿಸಿದೆ. ಅಸಂಘಟಿತ ಸಂತೆ ವ್ಯಾಪಾರಿಗಳು ಕಾನೂನುಗಳನ್ನು ಅನುಕೂಲಕ್ಕಾಗಿ ಬಳಸಿಕೊಂಡು ವ್ಯವಹಾರ ನಡೆಸಬೇಕು ಎಂದರು. ಮಾಜಿ ಉಪಮೇಯರ್‌ ಪುರುಷೋತ್ತಮ್‌ ಚಿತ್ರಾಪುರ ಸಭೆಯಲ್ಲಿ ಮಾತನಾಡಿದರು.

ಹೊಸ ಹುಮ್ಮಸ್ಸು
ಒಕ್ಕೂಟದ ಗೌರವಾಧ್ಯಕ್ಷ ಮನೋಹರ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುರತ್ಕಲ್‌ನಲ್ಲಿ ವಾರಕ್ಕೆ ಎರಡು ಸಂತೆ ನಡೆಯುತ್ತಿದೆ. ಇದೀಗ ಬುಧವಾರಕ್ಕೆ ಸೀಮಿತಗೊಳಿಸುವ ಹುನ್ನಾರಯಿದ್ದು, ಇದಕ್ಕೆ ಇಂಟಕ್‌ ಅವಕಾಶ ಮಾಡಿಕೊಡುವುದಿಲ್ಲ. ಮೇಯರ್‌ ಹಾಗೂ ಮುಖ್ಯ ಸಚೇ ತಕರು ರವಿವಾರ ಮತ್ತು ಬುಧವಾರ ಸಂತೆ ನಡೆಸಲು ಅನುಮತಿ ನೀಡುವ ಭರವಸೆ ನೀಡಿರುವುದು ವ್ಯಾಪಾರಿಗಳಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದರು.

ಪಣಂಬೂರು ಎಸಿಪಿ ಶ್ರೀನಿವಾಸ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ ಪಿ.ಕೆ., ರಾಜ್ಯ ಕಾರ್ಯದರ್ಶಿ ಅಬೂಬಕ್ಕರ್‌ ಕೃಷ್ಣಾಪುರ, ವೈ. ರಮಾನಂದ ರಾವ್‌, ಚಿತ್ತರಂಜನ್‌ ಶೆಟ್ಟಿ ಬೊಂಡಾಲ, ವಿನೋದ್‌ ರಾಜ್‌ ಪಣಂಬೂರ್‌ ಇಂಟಕ್‌ ಮುಖಂಡ ಫಾರೂಕ್‌, ರಿತೇಶ್‌, ಶೇಖರ್‌, ಜಾನ್‌ ಡಿ’ಸೋಜಾ, ಸ್ಟೀವನ್‌ ಡಿ’ಸೋಜಾ, ಸಂತೆ ವ್ಯಾಪಾರಸ್ಥರು ಒಕ್ಕೂಟದ ಅಧ್ಯಕ್ಷ ಬದ್ರುದ್ದಿನ್‌, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ದಿನೇಶ್‌ ಶೆಟ್ಟಿ ನಿರೂಪಿಸಿದರು. ಸಂತೆ ವ್ಯಾಪಾರಿ ಗಳು ಕೊಡಮಾಡಿದ ತ್ಯಾಜ್ಯ ಸಂಗ್ರಹ ಡಸ್ಟ್‌ ಬಿನ್‌ನ್ನು ಮೇಯರ್‌ ಉದ್ಘಾಟಿಸಿದರು.

Advertisement

ಭರವಸೆ 
ಪಾಲಿಕೆಯ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ ಮಾತನಾಡಿ, ಸಂತೆಯಲ್ಲಿ ಜನರಿಗೆ ಕಡಿಮೆ ದರದಲ್ಲಿ ತರಕಾರಿ ಸಹಿತ ವಸ್ತುಗಳು ಸಿಗುವಂತೆ ವ್ಯಾಪಾರಿಗಳು ಅನುಕೂಲ ಮಾಡಿಕೊಡಬೇಕು. ಸುರತ್ಕಲ್‌ನಲ್ಲಿ ರವಿವಾರ ಮತ್ತು ಬುಧವಾರ ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಇಂಟಕ್‌ ಘಟಕದ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ನೇತೃತ್ವದಲ್ಲಿ ಮನವಿ ಮಾಡಿದ್ದು, ಇದನ್ನು ಪುರಸ್ಕರಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next