Advertisement

ಸುರತ್ಕಲ್‌: ಅಭಿವೃದ್ಧಿ ಕಾಮಗಾರಿಗಾಗಿ ಬಸ್‌ನಿಲ್ದಾಣ ತೆರವು; ಜನರಿಗೆ ಸಂಕಷ್ಟ

03:59 PM Jul 05, 2023 | Team Udayavani |

ಸುರತ್ಕಲ್‌: ಸುರತ್ಕಲ್‌, ಕುಳಾಯಿ ಸಹಿತ ವಿವಿಧೆಡೆ ಸ್ಮಾರ್ಟ್‌ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ಬಸ್‌ ನಿಲ್ದಾಣಗಳು ಕೆಡ ವ ಲಾ ಗಿದ್ದು, ಇದೀಗ ಮಳೆಯ ಹೊಡೆತಕ್ಕೆ ಜನರಿಗೆ ತಮ್ಮ ಕೊಡೆಯೇ ಮಳೆಗೆ ರಕ್ಷಣೆ ಎಂಬಂತಾಗಿದೆ.

Advertisement

ಎಲ್ಲೆಡೆ ಬಿರುಸಿನ ಅಭಿವೃದ್ಧಿ ಕಾಮಗಾರಿ ಕಳೆದ ನಾಲ್ಕಾರು ವರ್ಷಗಳಿಂದ ನಡೆಯುತ್ತಿದ್ದು, ರಸ್ತೆ ವಿಸ್ತರಣೆ, ಜಂಕ್ಷನ್‌ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಮಗಾರಿ ಸಂದರ್ಭ ವಿಸ್ತರಣಾ ಕಾರ್ಯಗಳಿಗೆ ಅಡ್ಡಿಯಾಗಿದ್ದ ಬಸ್‌ ನಿಲ್ದಾಣಗಳನ್ನು ತೆರವು ಮಾಡಲಾಗಿತ್ತು.

ಇದೀಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಬಸ್‌ ನಿಲ್ದಾಣದ ಪ್ರಾಮುಖ್ಯತೆ ಅರಿವಿಗೆ ಬರುತ್ತಿದೆ. ಬೆಳಗ್ಗೆ ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು, ಸಿಬಂದಿ ಸೇರಿದಂತೆ ಸಾವಿರಾರು ಮಂದಿ ಕೊಡೆಯ ರಕ್ಷಣೆ ಸಾಲದೆ, ಪೂರ್ತಿ ಒದ್ದೆಯಾಗುವಂತಾಗಿದೆ. ವಿದ್ಯಾರ್ಥಿಗಳು ತಮ್ಮ ಯೂನಿಫಾರ್ಮ್ ಒದ್ದೆ ಮಾಡಿಕೊಂಡು ತರಗತಿಯಲ್ಲಿ ಪಾಠ ಕೇಳಬೇಕಾಗಿದೆ.

ಕೆಲವೊಮ್ಮೆ ಅರ್ಧತಾಸು ಆದರೂ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾಯುವ ಸ್ಥಿತಿ ಹಲವೆಡೆ ಇದ್ದು, ನಿಂತುಕೊಂಡು ಕೈ ಕಾಲು ನೋಯಿಸಿಕೊಳ್ಳುವ ಹೀನಾಯ ಸ್ಥಿತಿ ಎದುರಾಗಿದೆ. ಹಿರಿಯ ನಾಗರಿಕರು, ಅಸೌಖ್ಯ ಹೊಂದಿರುವವರು ಕುಳಿತುಕೊಳ್ಳಲು ಬೇಕಾದ ಸೌಲಭ್ಯವಿಲ್ಲದೆ ಸಮೀಪದ ಅಂಗಡಿ ಮುಗ್ಗಟ್ಟುಗಳ ಮೆಟ್ಟಿಲುಗಳನ್ನು ಆಶ್ರಯಿಸುವಂತಾಗಿದೆ.

ತಾತ್ಕಾಲಿಕ ಬಸ್‌ ನಿಲ್ದಾಣ ಯಾಕಿಲ್ಲ
ಅಭಿವೃದ್ಧಿ ಕಾಮಗಾರಿ ಆಗಬೇಕು ಎಂಬು ದರಲ್ಲಿ ಎರಡು ಮಾತಿಲ್ಲ. ಆದರೆ ಕರಾವಳಿ ಯಲ್ಲಿ ಮಳೆಯಿಂದ ರಕ್ಷಣೆಗೆ ಸುಸಜ್ಜಿತ ಬಸ್‌ ನಿಲ್ದಾಣ ಅಷ್ಟೇ ಅಗತ್ಯ. ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ಶೀಟ್‌ ಅಳವಡಿಸಿದ ತಂಗುದಾಣವನ್ನು ಮಳೆಗಾದಲ್ಲಿ ಪ್ರಯಾಣಿಕರ ರಕ್ಷಣೆಗಾಗಿ ನಿರ್ಮಿಸುವ ಅನಿವಾರ್ಯತೆಯಿದೆ.

Advertisement

ಚರ್ಚಿಸಿ ಕ್ರಮ ಜರುಗಿಸಲಾಗುವುದು
ತೀವ್ರ ಜಡಿ ಮಳೆಯಾಗುತ್ತಿದ್ದು, ಹಲವಾರು ಕಡೆ ಬಸ್‌ ನಿಲ್ದಾಣದ ಸೌಕರ್ಯವಿಲ್ಲ ಎಂಬುದು ಗಮನಕ್ಕೆ ಬಂದಿ ದೆ. ಪಾಲಿಕೆ ವತಿಯಿಂದ ಇಲ್ಲವೆ ಆಯಾ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ತಾತ್ಕಾಲಿಕವಾಗಿ ಶೀಟ್‌ ಆಳವಡಿಸಿ ಬಸ್‌ ತಂಗುದಾಣ ನಿರ್ಮಿಸಲು, ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು.
-ಜಯಾನಂದ ಅಂಚನ್‌,
ಮೇಯರ್‌ ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next