Advertisement

Surathkal ಆದಿತ್ಯ ಮುಕ್ಕಾಲ್ದಿ ಅವರಿಗೆ ನುಡಿ ನಮನ ಅರ್ಪಣೆ

12:31 AM Feb 28, 2024 | Team Udayavani |

ಸುರತ್ಕಲ್‌: ಚೇಳಾರ್‌ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾದ ಖಂಡಿಗೆ ಬೀಡುಆದಿತ್ಯ ಮುಕ್ಕಾಲ್ದಿ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಗೌರವಾರ್ಥ ಸಾರ್ವಜನಿಕ ನುಡಿನ ಮನ ಕಾರ್ಯಕ್ರಮ ಚೇಳಾರ್‌ ಖಂಡಿಗೆ ಬೀಡು ಶ್ರೀ ಧರ್ಮರಸು ದೈವಸ್ಥಾನದಲ್ಲಿ ನಡೆಯಿತು.

Advertisement

ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಚೇಳಾರ್‌ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವ ಸ್ಥಾನ ಕ್ಷೇತ್ರದಲ್ಲಿ ಗಡಿಪ್ರಧಾನರಾಗಿ ಆದಿತ್ಯ ಮುಕ್ಕಾಲ್ದಿ ಅವರ ನಿರಂತರ ಸೇವೆ ಯಿಂದ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಅವರ ಉಸಿರು ನಿಂತರೂ ಹೆಸರು ಶಾಶ್ವತವಾಗಿ ಉಳಿಯುವಂತಾಗಿದೆ. ಅವರ ಗುಣಗಳು ನಮಗೆ ಆದರ್ಶ ಪ್ರಾಯವಾಗಲಿ ಎಂದರು.

ಪಣಿಯೂರು ಗುತ್ತು ಕರುಣಾಕರ ಶೆಟ್ಟಿ ಮಾತನಾಡಿ, ಆದಿತ್ಯ ಮುಕ್ಕಾಲ್ದಿ 30ವರ್ಷಗಳ ಕಾಲ ಗಡಿ ಪ್ರಧಾನರಾಗಿ ಸಲ್ಲಿಸಿದ ಸೇವೆ ಅನನ್ಯ. ಅವರು ಕರ್ತವ್ಯದ ವೇಳೆ ಸೂರ್ಯನಂತೆ ಮಿನುಗಿದ್ದರು ಎಂದರು.

ಸುರತ್ಕಲ್‌ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್‌ ಶೆಟ್ಟಿ ಪೆರ್ಮುದೆ ಮಾತನಾಡಿ, ಆದಿತ್ಯ ಮುಕ್ಕಾಲ್ದಿ ಅವರು ಕೃಷಿ ಬದುಕಿನ ಜತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ತಣ್ತೀಸಿದ್ಧಾಂತದೊಂದಿಗೆ ಬದುಕಿದವರು. ದೈವಾರಾಧನೆಯಲ್ಲಿ ಅಧಿಕಾರ ಯುತವಾಗಿ ಮಾತನಾಡಿದ ವರು. ನಿಸ್ವಾರ್ಥ ಬದುಕನ್ನು ಅವರಲ್ಲಿ ಕಂಡುಕೊಂಡಿದ್ದೇವೆ. ತುಳುನಾಡಿನ ಆಚಾರ ವಿಚಾರ, ದೈವಾರಾಧನೆಯಲ್ಲಿ ಅವರಿಗೆ ಅಪಾರ ಅನುಭವ ಇತ್ತು. ಯಾವುದೇ ವಿಚಾರದಲ್ಲಿ ಅವರು ರಾಜಿಯಾಗುತ್ತಿರಲಿಲ್ಲ. ಅವರು ಕೃಷಿ, ಹೈನು ಗಾರಿಕೆ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರ ಗಳಲ್ಲೂ ತನ್ನನ್ನು ತೊಡಗಿಸಿ ಕೊಂಡವರು ಎಂದರು.

ದೈವಾರಾಧನೆಯ ಕ್ಷೇತ್ರದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಯುವಕ ರಿಗೆ ಪ್ರೇರಣಾ ಶಕ್ತಿಯಾಗಿದ್ದರು. ಒಳ್ಳೆಯ ಕೆಲಸಗಳನ್ನು ಮಾಡುವಾಗ ಯುವಕರನ್ನು ಹುರಿದುಂಬಿಸುತ್ತಿದ್ದರು ಎಂದು ಹೇಳಿದರು.ದೈವಾರಾಧನೆ ಕ್ಷೇತ್ರದಲ್ಲಿ ನಿರಂತರ ಮೂವತ್ತು ವರ್ಷಗಳ ಕಾಲ ಸೇವೆ ಮಾಡಿರುವ ಆದಿತ್ಯ ಮುಕ್ಕಾಲ್ದಿ ಅವರು ಗಡಿಪ್ರಧಾನರ ಮಧ್ಯೆ ಮಿಂಚಿದವರು ಎಂದು ಉದಯ ಕುಮಾರ್‌ ಶೆಟ್ಟಿ ಚೇಳಾರ್‌ ಪಡುಬಾಳಿಕೆ ತಿಳಿಸಿದರು.ರವೀಂದ್ರ ಶೆಟ್ಟಿ ಮದ್ಯ ನುಡಿನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next