ಸುರತ್ಕಲ್: ಟೋಲ್‌ಗೇಟ್ ವಿರೋಧಿಸಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸಚಿವ ಖಾದರ್ ವಿನಂತಿ, ಭರವಸೆಯನ್ನು ಮನ್ನಿಸಿ ಧರಣಿ ಅಂತ್ಯಗೊಳಿಸಲು ಸಮಿತಿ ನಿರ್ಧರಿಸಿದೆ.
ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ವಾರದೊಳಗಾಗಿ ರಾಜ್ಯ ಸರಕಾರದ ಮಟ್ಟದಲ್ಲಿ ಹೆ. ಪ್ರಾ ಧಿಕಾರದ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕರೆದೊಯ್ದು ವಿಲೀನ ಇಲ್ಲವೇ ರದ್ದುಗೊಳಿಸಲು ಮನವಿ ಅರ್ಪಿಸಲಾಗುವುದು. ಅಲ್ಲಿಯವರೆಗೆ ಧರಣಿ ಕೈಬಿಟ್ಟು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಹೋರಾಟ ಸಮಿತಿ ಧರಣಿ ಕೈಬಿಡಲು ನಿರ್ಧರಿಸಿತಲ್ಲದೆ ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ಮತ್ತೆ ಹೋರಾಟದ ಎಲ್ಲ ದಾರಿಗಳನ್ನು ಮುಕ್ತವಾಗಿಟ್ಟುಕೊಳ್ಳುವುದಾಗಿ ಎಚ್ಚರಿಸಿತು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ರಾಜ್ಯ ಸರಕಾರದ ನಿರ್ಧಾರಗಳಿಗೆ ಕೇಂದ್ರ ಬೆಲೆ ಕೊಡದೆ ಹೋದರೆ ನಾನೂ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಚಿವರ ಭರವಸೆ ಮೇರೆಗೆ ಧರಣಿ ಅಂತ್ಯಗೊಳಿಸುತ್ತಿದ್ದೇವೆ ಎಂದು ಘೋಷಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಿಜಯ್ ಕುಮಾರ್ ಶೆಟ್ಟಿ, ಮೊದಿನ್ ಬಾವಾ, ಐವನ್ ಡಿ’ಸೋಜಾ, ತಾ.ಪಂ.ಅಧ್ಯಕ್ಷ ಮೊಹಮ್ಮದ್ ಮೋನು, ಮಿಥುನ್ ರೈ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾç, ರೇವತಿ ಪುತ್ರನ್, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಹೋರಾಟ ಸಮಿತಿ, ವಿವಿಧ ಪಕ್ಷ, ಸಂಘಟನೆಗಳ ಮುಖಂಡರು, ಪದಾಧಿ ಕಾರಿಗಳು ಉಪಸ್ಥಿತರಿದ್ದರು.