ಸುರತ್ಕಲ್: ನೀರಿದ್ದ ಬಕೆಟ್ ಒಳಗೆ ಒಂಬತ್ತು ತಿಂಗಳ ಮಗು ಬಿದ್ದು ಸಾವು
09:46 AM Jan 01, 2020 | Team Udayavani |
ಸುರತ್ಕಲ್: ನೀರು ತುಂಬಿದ್ದ ಬಕೆಟ್ ಒಳಗೆ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ಸುರತ್ಕಲ್ ಕಡಂಬೋಡಿ ಬಳಿ ಮಂಗಳವಾರ ನಡೆದಿದೆ.
Advertisement
ಒಂಬತ್ತು ತಿಂಗಳ ಮಗು ಯಶ್ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.
ಮದ್ಯಪ್ರದೇಶ ಮೂಲದ ಕುಟುಂಬ ಇಲ್ಲಿನ ಎಂಆರ್ ಪಿಎಲ್ ನಲ್ಲಿ ಕೆಲಸಕ್ಕೆ ಬಂದಿದ್ದು ಕಡಂಬೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ತಾಯಿ ಬೆಳಗಿನ ಕೆಲಸ ಮುಗಿಸಿ ಮಲಗಿದ್ದ ವೇಳೆ ಮಗು ಯಶ್ ಆಟವಾಡುತ್ತಿತ್ತು. ಆದರೆ ಆಯತಪ್ಪಿ ನೀರಿದ್ದ ಬಕೆಟ್ ಗೆ ಕವುಚಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.