Advertisement
ರಾತ್ರಿ 8.30ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಯುವಕರು ಅಂಗಡಿಗೆ ಬಂದಿದ್ದರು. ಓರ್ವ ಮಾಸ್ಕ್ ಧರಿಸಿದ್ದು, ಇನ್ನೋರ್ವ ಟವೆಲನ್ನು ಮುಖಕ್ಕೆ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಕೃತ್ಯ ನಡೆಸಿ ದೂರದಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿ ಪರಾರಿಯಾದರು.
ಇರಿತಕ್ಕೆ ಒಳಗಾದ ಜಲೀಲ್
ಬೊಬ್ಬೆ ಹಾಕಿ ಸಮೀಪದ ಅಂಗಡಿ ಯತ್ತ ಓಡುತ್ತಾ ಬರುತ್ತಿದ್ದಾಗಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆದೊ ಯ್ಯಲಾಯಿತು. ಅಲ್ಲಿ ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟರು.
ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಯಾಗಿದ್ದ ಜಲೀಲ್ ಪತ್ನಿಯನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮಂಗಳೂರಿಗೆ ಸಾಗಿಸಲಾಗಿದೆ. ಕಮಿಷನರ್ ಭೇಟಿ
ಆಸ್ಪತ್ರೆ ಹಾಗೂ ಘಟನ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತ್ಯಕ್ಷದರ್ಶಿ ಗಳಿಂದ ಮಾಹಿತಿ ಪಡೆದುಕೊಂಡರು. ಮಾಧ್ಯಮದೊಂದಿಗೆ ಮಾತನಾ ಡಿದ ಅವರು, ಘಟನೆಗೆ ಕಾರಣ ಏನೆಂಬುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದರು.
Related Articles
ಘಟನ ಸ್ಥಳದಲ್ಲಿ ಸಿಸಿ ಕೆಮರಾ ಇಲ್ಲದಿರುವುದರಿಂದ ತತ್‌ಕ್ಷಣಕ್ಕೆ ಆರೋಪಿಗಳ ಮಾಹಿತಿ ಲಭ್ಯವಾಗಿಲ್ಲ. ಆದರೆ ಹತ್ತಿರದಲ್ಲಿರುವ ಇತರ ಸಿಸಿ ಟಿವಿಗಳ ಫೂಟೇಜ್ ಪರಿಶೀಲನೆ ನಡೆಯುತ್ತಿದ್ದೆ. ಅಲ್ಲಿ ಸಿಗುವ ಮಾಹಿತಿಯಂತೆ ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಮಿಷನರ್ ತಿಳಿಸಿದರು.
Advertisement
ಪರಿಸ್ಥಿತಿ ಶಾಂತಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ. ಬಿಗು ಬಂದೋ ಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸ್ಥಳೀಯವಾಗಿ ಪಣಂಬೂರು ಉಪವಿಭಾಗ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುವುದು. ಕ್ರಿಸ್ಮಸ್ ಹಬ್ಬ ಆಚರಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ತಪ್ಪು ಮಾಹಿತಿ, ಸಂದೇಶಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸಹಕರಿಸಬೆಕು ಎಂದು ಮನವಿ ಮಾಡಿದರು. ಘಟನ ಸ್ಥಳಕ್ಕೆ ಮಾಜಿ ಶಾಸಕ ಮೊದೀನ್ ಬಾವಾ, ಜಿಲ್ಲಾ ವಕ್ಫ್ ಆಧ್ಯಕ್ಷ ನಾಸೀರ್ ಲಕ್ಕೀಸ್ಟಾರ್, ಆಸ್ಪತ್ರೆಗೆ ಸಮುದಾಯದ ಧರ್ಮಗುರುಗಳು ಭೇಟಿ ನೀಡಿ ಪೊಲೀಸ್ ಆಯುಕ್ತರೊಂದಿಗೆ ಘಟನೆಯ ಕುರಿತು ಚರ್ಚಿಸಿದರು. ಘಟನೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಖಂಡಿಸಿದ್ದು. ಆರೋಪಿಗಳ ಶೀಘ್ರ ಪತ್ತೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಕೃಷ್ಣಾಪುರಕೊಲೆ ಪ್ರಕರಣ ಹಿನ್ನೆಲೆ: ಇಂದು ಬೆಳಗ್ಗೆ 6 ರಿಂದ ಡಿ.27ರ ಬೆಳಗ್ಗೆ 6 ರವರೆಗೆ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್144 ನಂತೆ ನಿಷೇಧಾಜ್ಞೆ ಜಾರಿ.