Advertisement

2 ಕುಟುಂಬ ಸ್ಥಳಾಂತರ, ರಸ್ತೆ ಸಮುದ್ರ ಪಾಲು

01:19 PM Aug 05, 2019 | Naveen |

ಸುರತ್ಕಲ್ : ಚಿತ್ರಾಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಎರಡು ಕುಟುಂಬಗಳನ್ನು ರವಿವಾರ ಸ್ಥಳಾಂತಗೊಳಿಸಿ ಸಮೀಪದ ಭಜನ ಮಂದಿರದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.

Advertisement

ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಗಳನ್ನು ಉಳಿಸಲು ಮರಳು ಚೀಲ ಅಳವಡಿಕೆ ಸಹಿತ ಸಾಧ್ಯವಾದ ಪ್ರಯತ್ನ ನಡೆಸಲಾಗುವುದು ಎಂದರು. ಚಿತ್ರಾಪುರ ಬಳಿ ರಸ್ತೆ ಭಾಗಶಃ ನೀರು ಪಾಲಾಗಿದ್ದು ಶಾಲೆಯ ಆಟದ ಮೈದಾನವನ್ನು ಉಳಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿ, ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಉಳಿದ ಭಾಗದಲ್ಲಿ ಕಲ್ಲು ಹಾಕುವ ಯೋಜನೆಯ ಪ್ರಸ್ತಾವನೆಯಿದೆ. ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಈ ಬಗ್ಗೆ ಹಣ ಬಿಡುಗಡೆಗೆ ಒತ್ತಾಯಿಸ ಲಾಗುವುದು ಎಂದರು.

ಮಾಜಿ ಮೇಯರ್‌ ಗಣೇಶ ಹೊಸಬೆಟ್ಟು, ರಘುವೀರ ಪಣಂಬೂರು, ಕಂದಾಯ ಅಧಿಕಾರಿ ನವೀನ ಉಪಸ್ಥಿತರಿದ್ದರು. ಚಿತ್ರಾಪುರ ಬಳಿ ಮನೆ, ಶೆಡ್‌ ಕುಸಿಯದಂತೆ ರವಿವಾರ ಮರಳು ಚೀಲ ಹಾಕುವ ತುರ್ತು ಕಾರ್ಯ ನಡೆಯಿತು. ಮಲ್ಲಮಾರ್‌, ಬೈಕಂಪಾಡಿ ಬಳಿಯೂ ಸಮುದ್ರದಕೊರೆತ ಮುಂದುವರಿದ್ದು ಹಲವು ವರ್ಷಗಳ ಬಳಿಕ ಸಮುದ್ರಭಾಗ ವಿಸ್ತಾರಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next