Advertisement

ಸೂರತ್‌ ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ‘ಹೂಸು’ಬಿಡುವ ಸ್ಪರ್ಧೆ!

10:30 AM Sep 16, 2019 | Hari Prasad |

ಸೂರತ್: ಹ್ಹೆಹ್ಹೆಹ್ಹೆ.. ಇದೇನ್ರೀ ಸ್ಪರ್ಧೆ, ಅಂತ ನಕ್ಕು ಸುಮ್ಮನಾಗಬೇಡಿ.. ಹಾಗಂತ ಛೀ.. ಇದೇನ್ರೀ.. ಇಂತಹ ಸ್ಪರ್ಧೆ ಯಾರಾದರೂ ಆಯೋಜಿಸುತ್ತಾರಾ? ಅಂತ ಮೂದಲಿಸಬೇಡಿ. ನಿಜಕ್ಕೂ  ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ದೊಡ್ಡದಾಗಿ, ಸುದೀರ್ಘವಾಗಿ ಹೂಸು ಬಿಡುವವರಿಗೆ ಇಲ್ಲಿದೆ ಗೆಲ್ಲುವ ಅವಕಾಶ. ಇದಕ್ಕಾಗಿ ‘ವಾಟ್ ದಿ ಫಾರ್ಟ್’ ಹೆಸರಿನಲ್ಲಿ ಸ್ಪರ್ಧೆ ನಡೆಯಲಿದೆ. ಸೆ.22ರ ರವಿವಾರ ಸ್ಪರ್ಧೆ ನಡೆಯಲಿದ್ದು, ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಎಂಬವರು ಈ ಸ್ಪರ್ಧೆ ಆಯೋಜಿಸಿದ್ದಾರೆ.

Advertisement

ಅಚ್ಚರಿ ಎಂದರೆ ಈ ಸ್ಪರ್ಧೆಯ ಆಲೋಚನೆ ಹೇಗೆ ಹುಟ್ಟಿತು ಎಂದು ಕಳಿದ್ದಕ್ಕೆ ಸಿಂಗೋಯಿ ವಿಚಿತ್ರ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನೆಮಾ ನೋಡುತ್ತಿದ್ದೆ. ಈ ವೇಳೆ ಒಂದು ದೊಡ್ಡ ಹೂಸು ಬಿಟ್ಟಿದ್ದು ಎಲ್ಲರೂ ನಕ್ಕರು. ಇದೇ ವೇಳೆ ಹೀಗೊಂದು ಸ್ಪರ್ಧೆ ಮಾಡಿದರೆ ಹೇಗೆ? ನಾನು ಗೆಲ್ಲಬಹುದಲ್ಲವೇ? ಎಂಬ ಆಲೋಚನೆ ಹುಟ್ಟಿತು. ಅಲ್ಲದೇ ಇದುವರೆಗೆ ಭಾರತದಲ್ಲಿ ಇಂಥದ್ದೊಂದು ಸ್ಪರ್ಧೆ ಆಯೋಜನೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಂಗೋಯಿ ಅವರ ಪ್ರಕಾರ ಮೂರು ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. 60 ಸೆಕೆಂಡ್ ಸಮಯವಿರಲಿದೆ. ಸ್ಟ್ಯಾಂಡ್‌ ಅಪ್ ಹಾಸ್ಯಗಾರ ದೇವಾಂಗ್ ರಾವಲ್, ಸ್ಥಳೀಯ ವೈದ್ಯರು ಜಡ್ಜ್ ‌ಗಳಾಗಿ ಭಾಗಿಯಾಗಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುವುದು. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next