ಸೂರತ್: ಇತ್ತೀಚಿಗಷ್ಟೆ ಪುಣೆಯ ವ್ಯಕ್ತಿಯೊಬ್ಬ 2,89 ಲಕ್ಷ ಬೆಲೆಬಾಳುವ ಚಿನ್ನದ ಫೇಸ್ ಮಾಸ್ಕ್ ಧರಿಸಿರುವ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಜ್ಯುವೆಲ್ಲರಿ ಶಾಫ್ ಒಂದು 4 ಲಕ್ಷ ಬೆಲೆಬಾಳುವ ಫೇಸ್ ಮಾಸ್ಕ್ ಒಂದನ್ನು ಮಾರಾಟಕ್ಕಿಟ್ಟಿದೆ.
4 ಲಕ್ಷ ಬೆಲೆಬಾಳುವಂತದ್ದು ಅಂತದ್ದೇನಿದೆ ಎಂದು ನೀವು ಭಾವಿಸಬಹುದು. ಈ ಫೇಸ್ ಮಾಸ್ಕ್ ಅನ್ನು ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್ ಡೈಮಂಡ್ ಬಳಸಿ ತಯಾರಿಸಲಾಗಿದೆ. ಇದನ್ನು ಬರೋಬ್ಬರಿ ಒಂದು ತಿಂಗಳು ಕಾಲಾವಕಾಶದಲ್ಲಿ ತಯಾರಿಸಲಾಗಿದ್ದು, ಮಾಸ್ಕ್ ನಲ್ಲಿ ಚಿನ್ನಾಭರಣಗಳ ಲೇಯರ್ ಅನ್ನು ಕೂಡ ಕಾಣಬಹುದು.
ಜ್ಯುವೆಲ್ಲರಿ ಅಂಗಡಿ ಮಾಲಿಕರಾದ ದೀಪಕ್ ಚೋಕ್ಸಿ ಎಂಬವರಿಗೆ ಗ್ರಾಹಕರೊಬ್ಬರು ಈ ಐಡಿಯಾ ನೀಡಿದ್ದು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅವರು ಆ ಘಟನೆಯನ್ನು ಸ್ವಾರಸ್ಯವಾಗಿ ತಿಳಿಸಿದ್ದಾರೆ ಕೇಳಿ.
ಇದನ್ನೂ ಓದಿ: ಐಶ್ವರ್ಯ ರೈ, ಮಗಳು ಆರಾಧ್ಯಗೂ ಕೋವಿಡ್ ಪಾಸಿಟಿವ್: ಜಯಾ ಬಚ್ಚನ್ ವರದಿ ನೆಗೆಟಿವ್
ಒಮ್ಮೆ ಗ್ರಾಹಕರೊಬ್ಬರು ತನ್ನ ಮದುವೆಗೆ ಆಭರಣಗಳನ್ನು ಕೊಳ್ಳಲೆಂದು ಬಂದಿದ್ದರು. ಆದರೇ ಅವರ ಮದುವೆ ಈ ವರ್ಷ ಇರಲಿಲ್ಲ. ನನ್ನ ಪ್ರಕಾರ ಮುಂದಿನ ವರ್ಷವಿದ್ದಿರಬೇಕು. ಅವರು ಅಭರಣ ಕೊಳ್ಳುವಾಗ ಫೇಸ್ ಮಾಸ್ಕ್ ಕೂಡ ಬೇಕೆಂದು ಬೇಡಿಕೆಯಿಟ್ಟರು. ನಾನು ಕೂಡಲೇ ಡಿಸೈನರ್ ಬಳಿ ಈ ಕುರಿತು ಚರ್ಚಿಸಿ ನಂತರ ಸಿದ್ಪಡಿಸಿದೆವು.
ಎರಡು ಮಾದರಿಯ ಮಾಸ್ಕ್ ತಯಾರಿಸಲಾಗಿದ್ದು, ಒಂದರಲ್ಲಿ ಚಿನ್ನ ಮತ್ತು ಅಮೇರಿಕನ್ ಡೈಮಂಡ್ಸ್ ಅಳವಡಿಸಲಾಗಿದ್ದು 1. 5 ಲಕ್ಷ ರೂ ಗಳಿಗೆ ಮಾರಾಟವಾಗಿದೆ. ಮತ್ತೊಂದರಲ್ಲಿ ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್ ವಜ್ರ ಬಳಸಲಾಗಿದ್ದು 4 ಲಕ್ಷ ರೂ. ಗಳಿಗೆ ಮಾರಟಕ್ಕಿವೆ ಎಂದಿದ್ದಾರೆ. ಮಾತ್ರವಲ್ಲದೆ ಈ ಮಾಸ್ಕ್ ಗಳನ್ನು ಮಾರ್ಪಡಿಸಿ ನೆಕ್ಲೇಸ್ ಮತ್ತು ಬ್ರೇಸ್ ಲೇಟ್ ಆಗಿಯೂ ಪರಿವರ್ತಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.