Advertisement

ಸೂರತ್‌ ಅಗ್ನಿ ಅವಘಡ: ನಿರಶನ ಬೆದರಿಕೆ ಹಾಕಿದ ಹಾರ್ದಿಕ್‌ ಪೊಲೀಸರ ವಶಕ್ಕೆ

09:56 AM May 28, 2019 | Team Udayavani |

ಸೂರತ್‌ : 22 ವಿದ್ಯಾರ್ಥಿಗಳನ್ನು ಬಲಿ ಪಡೆದಿರುವ ಸೂರತ್‌ ಕೋಚಿಂಗ್‌ ಕ್ಲಾಸ್‌ ಸೆಂಟರ್‌ ಅಗ್ನಿ ದುರಂತಕ್ಕೆ ಸಂಬಂಧಿಸಿ ಗುಜರಾತ್‌ ಸರಕಾರ ಸೂರತ್‌ ಮೇಯರ್‌ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ತನಕ ತಾನು ಅನ್ನ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿರುವ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರನ್ನು ಇಂದು ಸೋಮವಾರ ಪೊಲೀಸರು ವಶಕ್ಕೆ ತೆಗೆದುಕೊಂಡರು.

Advertisement

ಅಗ್ನಿ ಅವಘಡ ನಡೆದ ಸ್ಥಳಕ್ಕೆ ಸಮೀಪ ಪ್ರತಿಭಟನೆ ಕೈಗೊಳ್ಳಲು ಸರ್ತಾನಾ ಪೊಲೀಸ್‌ ಠಾಣೆ ಅನುಮತಿಯನ್ನು ಕಾಂಗ್ರೆಸ್‌ ಕೋರಿತ್ತು. ಆದರೆ ಅನುಮತಿ ನಿರಾಕರಿಸಲಾಗಿತ್ತು. ಆದಾಗ್ಯೂ ಅವಘಡ ತಾಣಕ್ಕೆ ತೆರಳಲು ಮುಂದಾದ ಪಟೇಲ್‌ ಅವರನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ಬಂಧಿಸಿದರು ಎಂದು ಸೂರತ್‌ ಪೊಲೀಸ್‌ ಕಮಿಷನರ್‌ ಸತೀಶ್‌ ಶರ್ಮಾ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಶರ್ಮಾ, ಅವರು ಪಟೇಲ್‌ ನಿನ್ನೆಯೇ ಅವಘಡ ತಾಣಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಎದುರಾಳಿ ಗುಂಪಿನವರು ಪಟೇಲ್‌ ಮೇಲೆ ಹಲ್ಲೆ ನಡೆಸಿದ್ದರು. ಅಂತೆಯೇ ಪಟೇಲ್‌ ಅವರ ಭದ್ರತೆಯ ಸಲುವಾಗಿ ಅವರಿಗೆ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ. ದಿನಂಪ್ರತಿ ಅವರು ಅವಘಡ ತಾಣಕ್ಕೆ ಭೇಟಿ ಕೊಡುವುದು ಕೂಡ ಸರಿಯಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next