Advertisement

ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಿ

05:27 PM Jan 05, 2020 | Naveen |

ಸುರಪುರ: ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದ್ದು, ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸುವಂತೆ ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾಸುಲ್ತಾನ್‌ ಸಲಹೆ ನೀಡಿದರು.

Advertisement

ನಗರದ ಸ್ತ್ರೀಶಕ್ತಿ ಭವನದಲ್ಲಿ ಜಿಪಂ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟ್‌ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕಲಿಕಾ ಟಾಟಾ ಟ್ರಸ್ಟ್‌ ಜಿಲ್ಲಾ ವ್ಯವಸ್ಥಾಪಕಿ ಹಾಗೂ ಸಂಪನ್ಮೂಲ ವ್ಯಕ್ತಿ ಮಲ್ಲಮ್ಮ ಬಿರಾದಾರ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗಾಗಿ ಸರ್ಕಾರ ಟಾಟಾ ಟ್ರಸ್ಟ್‌ ಸಹೋಗದೊಂದಿಗೆ ಅನುಷ್ಠಾನಗೊಳಿಸಿದೆ. ಕಾರ್ಯಕರ್ತೆಯರು ಶಿಬಿರದಲ್ಲಿ ಕಲಿತ ಅಂಶಗಳನ್ನು ಮಕ್ಕಳಿಗೆ ಕಲಿಸಿಕೊಡುವ ಮೂಲಕ ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.

ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಕ್ಕಳಲ್ಲಿ ಶಿಸ್ತಿನೊಂದಿಗೆ ಅಕ್ಷರಭ್ಯಾಸ ಮತ್ತು ಸಾಮಾನ್ಯ ಜ್ಞಾನ ತಿಳಿಸಿಕೊಡುವುದರಿಂದ ಮಕ್ಕಳ ಬೌದ್ಧಿಕತೆ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕಾರ್ಯಕರ್ತೆಯರು ಹೆಚ್ಚಿನ ಹೊರೆ ಎಂದು ಭಾವಿಸದೇ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ-ಮೇಲ್ವಿಚಾರಕಿ ಶಶಿಕಲಾ ಗಾಳಿ ಮಾತನಾಡಿ,
ಮಕ್ಕಳ ಭಾಷಾ ಬೆಳವಣಿಗೆ, ಬೆಳಕು, ಶಬ್ದ ರೂಪ, ವಿಧಾನ, ಸಾಮಾನ್ಯ ಗಣಿತ, ವಸ್ತುವಿನ ಸ್ಥಾನ ಪಲ್ಲಟ, ಪದಬಂಧ, ಪದಗಳ ಜೋಡಣೆ, ಪದಗಳ ಮರು ಬಳಕೆ, ಪ್ರಾಣಿ-ಪಕ್ಷಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳ ಕುರಿತು ಕಾರ್ಯಕರ್ತೆಯರು ಮಕ್ಕಳಿಗೆ ತಿಳಿಸಿಕೊಡಬೇಕು. ಕಥೆ, ಹಾಡು, ನೃತ್ಯದ ಮೂಲಕ ಜ್ಞಾನದ ಅರಿವು ಮೂಡಿಸಬೇಕು ಎಂದರು.

Advertisement

ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಮೀನಾಕ್ಷಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತ ನಾಡಿ, 17 ಕ್ಲಸ್ಟರ್‌ಗಳಲ್ಲಿ ತರಬೇತಿ ನಡೆಯುತ್ತಿದೆ. ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ ಕುರಿತು ಕಲಿಸಿಕೊಡಲಾಗಿದೆ. ಇನ್ನು ಮುಂದೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ ಎಂದರು. ಮೇಲ್ವಿಚಾರಕಿ ಪದ್ಮಾ ನಾಯಕ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next