Advertisement

ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ: ಶಾಸಕ ರಾಜೂಗೌಡ

01:38 PM Oct 04, 2019 | Naveen |

ಸುರಪುರ: ನಗರದ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಕವಡಿಮಟ್ಟಿ ಮತ್ತು ಹಸನಾಪುರ ಹತ್ತಿರದ ಕೆರೆಗಳನ್ನು ಪರಿಶೀಲಿಸಲಾಗಿದೆ. ಶುದ್ಧೀಕರಣ ಘಟಕ ಅಳವಡಿಸಿ ನೀರು ಒದಗಿಸಲು ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ರಾಜೂಗೌಡ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾಯಿಂದ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸುವಂತಾಯಿತು. ಮೇಲಾಗಿ ಇತ್ತೀಚಿನ ಪ್ರವಾಹದಿಂದ ಶೆಳ್ಳಗಿ ಜಾಕ್‌ವೆಲ್‌ನಲ್ಲಿ ಎರಡು ಮೋಟಾರ್‌, ಸ್ವಾಟರ್‌ಗಳು ಸುಟ್ಟು ಹೋಗಿದ್ದವು. ಈ ಎಲ್ಲ ಕಾರಣಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ತಿಳಿಸಿದರು.

ಪಾದಯಾತ್ರೆ ವೇಳೆ ಬಹುತೇಕ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕೇಳಿ
ಬಂದಿದೆ. ಮೇಲಾಗಿ ಅನುದಾನದ ಕೊರತೆಯೂ ಇತ್ತು. ಈಗ ಅನುದಾನ ತಂದಿದ್ದೇನೆ. ಅದರ ಕೊರತೆ ಇಲ್ಲ ಸರಿಯಾಗಿ ಕೆಲಸ ಮಾಡಿ ಅಗತ್ಯ ಇರುವ ಕಡೆ ಹೊಸ ಕೊಳವೆಬಾವಿ ಕೊರೆಸಿ ಜನರಿಗೆ ಸಮರ್ಪಕವಾಗಿ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಸರಿ ಹೋಗಲಿದೆ ಎಂದು ತಿಳಿಸಿದರು.

ಬೆಳಗ್ಗೆ 7:00ಕ್ಕೆ ಸತ್ಯಂಪೇಟೆ, ದಿವಳಗುಡ್ಡ, ರಂಗಂಪೇಟ, ತಿಮ್ಮಾಪುರ, ಹಸನಾಪುರ ಸೇರಿದಂತೆ ಪ್ರತಿ ವಾರ್ಡ್‌ಗೂ ಭೇಟಿ ನೀಡಿದರು. ಅಲ್ಲಿಯ ಸಮಸ್ಯೆ ಕುರಿತು ಬಡಾವಣೆ ಜನರಿಂದ ದೂರು ಆಲಿಸಿದರು. ಕೆಲ ಬಡವಾಣೆಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ ಚರಂಡಿ, ನೈರ್ಮಲ್ಯ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ಇತ್ಯರ್ಥಗೊಳಿಸುವಂತೆ ತಾಕೀತು ಮಾಡಿದರು. ವಸತಿ ಯೋಜನೆಯಡಿ ಮನೆಕಟ್ಟಿಕೊಂಡವರಿಗೆ ಕೂಡಲೇ ಹಣ ಪಾವತಿಸುವಂತೆ ಹಾಗೂ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳ ನಿವೇಶನ ಜಿಪಿಆರ್‌ಎಸ್‌ ಮಾಡುವಂತೆ ಸೂಚಿಸಿದರು.

Advertisement

ಕಳೆದ ಎರಡು ದಿನಗಳಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಗುರುವಾರ ಹಸನಾಪುರ ವಾರ್ಡ್‌ನಲ್ಲಿ ಮುಕ್ತಾಯಗೊಳಿಸಿದರು. ಜಿಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ಪಕ್ಷದ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ, ದೊಡ್ಡ ದೇಸಾಯಿ ದೇವರಗೋನಾಲ, ಯಲ್ಲಪ್ಪ ಕುರುಕುಂದಿ, ಬಲಭೀಮನಾಯ ಬೈರಿಮಡ್ಡಿ, ಸಣ್ಣ ದೇಸಾಯಿ ದೇವರಗೋನಾಲ, ಮಲ್ಕಯ್ಯ
ತೇಲ್ಕರ್‌, ಭೀಮಾಶಂಕರ ಬಿಲ್ಲವ, ಮಲ್ಲೇಶಿ ಪೂಜಾರಿ, ಚಂದ್ರು ದಿವಳಗುಡ್ಡ, ಹಣಮಂತ ಕುಂಬಾರಪೇಟ, ಮಹ್ಮದ್‌ಗೌಸ್‌ ಖುರೇಸಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next