Advertisement

ಪ್ರತಿಯೊಬ್ಬರು ಸಸಿ ನೆಟ್ಟು ಮಗುವಿನಂತೆ ಪೋಷಿಸಿ

05:42 PM Jul 19, 2019 | Naveen |

ಸುರಪುರ: ಪರಿಸರ ವಿನಾಶದಿಂದಾಗಿಯೇ ನಾವೀಗ ಮಳೆ ಅಭಾವ ಎದುರಿಸು ವಂತಾಗಿದೆ. ವಾತಾವರಣದಲ್ಲಿ ಉಂಟಾಗುತ್ತಿರುವ ವೈಪರಿತ್ಯಗಳಿಂದ ತಾಪಮಾನ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರು ಮನೆಗಳ ಆವರಣದಲ್ಲಿ ಸಸಿ ನೆಟ್ಟು ಮಗುವಿನಂತೆ ಪೋಷಿಸಬೇಕು ಎಂದು ದಲಿತ ಮುಖಂಡ ಶಿವಲಿಂಗಪ್ಪ ಚಲುವಾದಿ ಹೇಳಿದರು.

Advertisement

ರಂಗಂಪೇಟೆ ತರಕಾರಿ ಮಾರುಕಟ್ಟೆ ಸಮೀಪ ಅರಣ್ಯ ಇಲಾಖೆ ಹಾಗೂ ಹಸನಾಪುರ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈಗ ಪರಿಸರ ನಾಶ ಮಾಡಿ ಮನೆ ಬಂಗ್ಲೆಗಳನ್ನು ಕಟ್ಟುತ್ತಿದ್ದಾನೆ. ಇದೇ ಪರಿಸ್ಥಿತಿ ಮುಂದುವರಿದರೆ ಶುದ್ಧ ಗಾಳಿ, ನೀರು ಪಡೆಯಲು ಪರದಾಡಬೇಕಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದಕ್ಕಿಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಮನೆಗೊಂದು ಸಸಿ ನೆಟ್ಟು ಮಗುವಿನಂತೆ ಪೋಷಿಸಿ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ವಲಯ ಅರಣ್ಯಾಧಿಕಾರಿ ಶಾಂತರೆಡ್ಡಿ ಹೊಸಳ್ಳಿ ಮಾತನಾಡಿ, ಅರಣ್ಯ ರಾಷ್ಟ್ರೀಯ ಸಂಪತ್ತು. ಅದನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಸಿ ನಾಟಿ ಮಾಡಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಮುಗಿಯಲಿಲ್ಲ. ಹಾಳಾಗದಂತೆ ಕ್ರಮ ವಹಿಸುವುದು ಅಷ್ಟೇ ಮುಖ್ಯವಾಗಿದೆ. ಆಟೋ ಚಾಲಕರಾದ ತಾವೆಲ್ಲ ಯುವಕರು ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಸಸಿ ನೆಡಲು ಮುಂದಾಗಿರುವುದು ಸಂತಸ ತಂದಿದೆ.

ಪ್ರತಿಯೊಬ್ಬ ಚಾಲಕರು ಒಂದೊಂದು ಮರವನ್ನು ದತ್ತು ತೆಗೆದುಕೊಂಡು ನಿತ್ಯ ಒಂದೊಂದು ಕೊಡ ನೀರುಣಿಸಿ ಪೋಷಿಸಿದರೆ ನಿಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

Advertisement

ಪ್ರಮುಖರಾದ ಮಹೇಂದ್ರಕುಮಾರ, ಬಿಲ್ಲವ ಮುಬಾರಕ್‌, ಗಿರಣಿ ಅಪ್ಸರ ಪಾನಪಟ್ಟಿ, ಅಟೋ ಚಾಲಕರಾದ ಮಹೇಶ ಬಿಲ್ಲವ ರಂಗನಾಥ ತುಪ್ಪದ, ಮಲ್ಲಪ್ಪ ಮರಕಲ್, ಮಾಣಪ್ಪ ಉಲ್ಪೇನರ್‌, ಅಶೋಕ ಬಿಲ್ಲವ, ಹಣಮಂತ ಬಿಲ್ಲವ, ಸೂಲಪ್ಪ ಮರಕಲ್, ನಾಗರಾಜ ಬಲ್ಲಿವ, ಹಣಮಂತ ಶಹಾಬಾದ, ಮಾನಪ್ಪ ಬಿಲ್ಲವ, ಹಣಮಂತ ಹೊಸಮನಿ, ಸಂತೋಷ ಉಲ್ಪೇನರ್‌, ಪವನಕುಮಾರ ಸೂಗೂರು, ರಾಘವೇಂದ್ರ ಹೊಸ್ಮನಿ, ಅತೀಕ್‌ಐಮದ್‌, ಅನೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next