Advertisement

ಕ್ರೀಡೆ ಆರೋಗ್ಯಕ್ಕೆ ಸಹಕಾರಿ

04:33 PM Aug 31, 2019 | Naveen |

ಸುರಪುರ: ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಭಾರತ ಸರಕಾರ ನೆಹರು ಯುವ ಕೇಂದ್ರ ಆಯ್ಕೆ ಸಮಿತಿ ಸದಸ್ಯ ಲಕ್ಷ್ಮೀಕಾಂತ ದೇವರಗೋನಾಲ ಹೇಳಿದರು.

Advertisement

ತಾಲೂಕಿನ ಬೋನ್ಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಣವ್‌ ಸಾಂಸ್ಕೃತಿಕ ಸೇವಾ ಸಮಿತಿ ಹಾಗೂ ಪುಟ್ಟರಾಜ ಜನಕಲ್ಯಾಣ ಯುವಕ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಆಟ ಕೂಡ ಅಷ್ಟೇ ಮುಖ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಲವಲವಿಕೆ ಹೆಚ್ಚಾಗಿ ಓದಿನಲ್ಲಿ ಆಸಕ್ತಿ ಮೂಡತ್ತದೆ ಎಂದು ತಿಳಿಸಿದರು.

ಸುರೇಶ ಕುಂಬಾರ ಮಾತನಾಡಿ, ದೇಶ ಕಂಡ ಅಪ್ರತಿಮ ಶ್ರೇಷ್ಠ ಕ್ರೀಡಾಪಟು ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮದಿನ ಪ್ರಯುಕ್ತ ನಾವು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನೆಹರು ಯುವ ಕೇಂದ್ರ ಆಯ್ಕೆ ಸಮಿತಿ ಸದಸ್ಯ ಗಂಗಾಧರ ನಾಯಕ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್, ಕಂಪ್ಯೂಟರ್‌, ಅಂತರ್ಜಾಲದಲ್ಲಿ ಆಟವಾಡುತ್ತಾರೆ. ಆದರೆ ದೇಹಕ್ಕೆ ದಂಡಿಸುವ ವಾಯ್ನಾಮ ಆಗುವ ಯಾವುದೇ ಕ್ರೀಡೆ ಆಡುತ್ತಿಲ್ಲ. ಹೀಗಾಗಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಉತ್ತಮ ಆರೋಗ್ಯ ಗಳಿಸಲು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಈ ವೇಳೆ ಗುರು ಪುಟ್ಟರಾಜ ಯುವಕ ಸಂಘದಿಂದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಿಸಲಾಯಿತು. ಶಾಲೆ ಪ್ರಧಾನ ಗುರು ಶರಣು ಪಾಕರಡ್ಡಿ ಅಧ್ಯಕ್ಷತೆ ವಹಸಿದ್ದರು. ಯುವಕ ಸಂಘದ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಪ್ರಾಸ್ತವಿಕ ಮಾತನಾಡಿದರು. ಎಸ್‌ಡಿಎಂ ಸದಸ್ಯ ಸಿದ್ರಾಮಪ್ಪ ಕಟ್ಟಿಮನಿ, ಗ್ರಾಮದ ಪ್ರಮುಖ ಸಂಗಯ್ಯಸ್ವಾಮಿ ಹಿರೇಮಠ, ಶಿಕ್ಷಕರಾದ ಮಾನಪ್ಪ, ಯಮನೂರಪ್ಪ, ಗುರಪ್ಪ ಮೇಘಾ ಗಂಗನಗೌಡರ, ಈರಮ್ಮ ಇದ್ದರು. ಮಾನಪ್ಪ ಸ್ವಾಗತಿಸಿದರು. ಗುರಪ್ಪ ನಿರೂಪಿಸಿದರು. ಮೇಘಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next