Advertisement

ರಾಷ್ಟ್ರೀಯ ಲೋಕ ಅದಾಲತ್‌

04:22 PM Feb 09, 2020 | Naveen |

ಸುರಪುರ: ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ 102 ಪ್ರಕರಣ ಇತ್ಯರ್ಥ ಪಡಿಸಲಾಗಿದ್ದು, ವಿವಿಧ ಕಟ್ಲೆಗಳಿಂದ 23 ಲಕ್ಷ 40 ಸಾವಿರ ರೂ. ವಸೂಲಿ ಮಾಡಲಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್‌ ತಿಳಿಸಿದರು.

Advertisement

ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ ನಂತರ ಮಾತನಾಡಿದ ಅವರು, ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ 19, ಕಿರಿಯ ನ್ಯಾಯಾಲಯದಲ್ಲಿ 57 ಮತ್ತು ಹೆಚ್ಚುವರಿ ನ್ಯಾಯಾಲಯದಲ್ಲಿ 26
ಸೇರಿದಂತೆ ಒಟ್ಟು 102 ಪ್ರಕರಣ ಇತ್ಯರ್ಥ ಪಡಿಸಲಾಗಿದೆ ಎಂದು ವಿವರಿಸಿದರು.

ಜನನ ಮರಣಗಳಿಗೆ ಸಂಬಂಧಿಸಿದ 68, ಲಘು ಪ್ರಕರಣ 25, ದಿವಾನಿ ಪ್ರಕರಣ 27, ಮೋಟಾರು ಅಪಘಾತ ಪ್ರಕರಣ 2, ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪೂರ್ವ ವ್ಯಾಜ್ಯ ಪ್ರಕರಣ 3 ಇತ್ಯರ್ಥ ಪಡಿಸಲಾಗಿದೆ ಎಂದರು. ಸುಪ್ರೀಂಕೋರ್ಟ್‌ ಮತ್ತು ಹೈ ಕೋರ್ಟ್‌ ನಿರ್ದೇಶನ ಮೇರೆಗೆ ಪ್ರತಿ ತಿಂಗಳು 2ನೇ ಶನಿವಾರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಸಲಾಗುತ್ತಿದೆ. ಸಂಧಾನಕಾರ ವಕೀಲರನ್ನು ನೇಮಿಸಿ ಆ ಮೂಲಕ ಎರಡು ಕಡೆ ಕಕ್ಷಿದಾರರ ನಡುವೆ ರಾಜಿ ಸಂಧಾನ ನಡೆಸಿ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ. ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಎಂದು ತಿಳಿಸಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಬಿ.ಎನ್‌. ಅಮರನಾಥ ಮಾತನಾಡಿ, ಅದಾಲತ್‌ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದರಿಂದ ಕಕ್ಷಿದಾರರಿಗೆ ಹಣ ಮತ್ತು ಸಮಯ ಎರಡು ಉಳಿಯುತ್ತದೆ. ವ್ಯರ್ಥ ಕೋರ್ಟ್‌ಗೆ ಅಲೆಯುವುದು ತಪ್ಪುತ್ತದೆ. ಮೇಲಾಗಿ ತ್ವರಿತ ನ್ಯಾಯದಾನ ದೊರಕುತ್ತದೆ. ಕಾರಣ ಕಕ್ಷಿದಾರರು ಇದರು ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿರಿಯ ನ್ಯಾಯಾಲದಲ್ಲಿ ವಕೀಲ ಬಲಭೀಮ ನಾಯಕ, ಕಿರಿಯ ನ್ಯಾಯಾಲಯದಲ್ಲಿ ರವಿ ಗೋನಾಲ ಸಂಧಾನಕಾರರಾಗಿ ಕರ್ತವ್ಯ ನಿರ್ವಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next