ಸುರಪುರ: ನಗರ ಸೇರಿದಂತೆ ಕೆಂಭಾಬಿ, ಯಾಳಗಿ, ಆಲ್ದಾಳ, ಸೂಗೂರಿನ ವಿವಿಧ ಕ್ವಾರಂಟೈನ್ ಕೇಂದ್ರಗಳಿಂದ ಶನಿವಾರ 639 ವಲಸೆ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಬಸ್ ಮೂಲಕ ಕಳುಹಿಸಿಕೊಡಲಾಯಿತು.
ನೆರೆ ರಾಜ್ಯದಿಂದ ಆಗಮಿಸಿದ್ದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಅವಲೋಕನೆಗೆ ಇರಿಸಲಾಗಿತ್ತು. ಅದರಲ್ಲಿ 6398 ಕಾರ್ಮಿಕರ ಕೋವಿಡ್ ವರದಿ ನೆಗೆಟಿವ್ ಬಂದಿದ್ದರಿಂದ ಮತ್ತು ಅವಲೋಕನ ಅವಧಿ ಮುಗಿದಿದ್ದರಿಂದ ಅವರನ್ನು ಮನೆಗೆ ಕಳುಹಿಸಲಾಯಿತು. ಈಗ ನಗರದ ಎಲ್ಲ ಕ್ವಾರಂಟೈನ್
ಕೇಂದ್ರಗಳು ಖಾಲಿ ಇವೆ.
ಕಾರ್ಮಿಕರು ಗ್ರಾಮಕ್ಕೆ ಹೋದ ಮೇಲೆ ಹೊರಗಡೆ ತಿರುಗಾಡದೆ, ಸಭೆ ಸಮಾರಂಭ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಸೇರದೆ ಸಾರ್ವತ್ರಿಕವಾಗಿ ಯಾರೊಂದಿಗೂ ಬೆರೆಯದೆ 14 ದಿನ ಮನೆಯಲ್ಲಿಯೇ ಇರಬೇಕು. ಮನೆಗೆ ಹೋದ ಕಾರ್ಮಿಕರಿಂದ ಅಂತರ ಕಾಯ್ದಕೊಳ್ಳಲು ಅವರ ಕುಟುಂಬದವರಿಗೂ ತಿಳಿಸಲಾಗಿದೆ ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ, ಸಿಡಿಪಿಒ ಲಾಲಸಾಬ ಪೀರಾಪುರ ಇದ್ದರು.