Advertisement

ಅಮಾನತು ಆದೇಶ ಹಿಂಪಡೆಯಿರಿ

06:34 PM Sep 08, 2019 | Team Udayavani |

ಸುರಪುರ: ತಾಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಲಿತ ಸಮುದಾಯದ ಮುಖ್ಯ ಶಿಕ್ಷಕನ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಹಾಗೂ ತಾಲೂಕು ಘಟಕದ ಕಾರ್ಯಕರ್ತರು ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಮುತ್ತಿಗೆ ಕೈ ಬಿಡುವಂತೆ ಪೊಲೀಸ್‌ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸೂಕ್ತ ತನಿಖೆ ಮಾಡಿಸುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿ ಭರವಸೆ ನೀಡಿದ ಪ್ರಯುಕ್ತ ಮುತ್ತಿಗೆ ಕೈ ಬಿಟ್ಟು ಪ್ರತಿಭಟನೆ ನಡೆಸಿದರು.

ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ತಾಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಲಿತ ಸಮುದಾಯಕ್ಕೆ ಸೇರಿದ್ದ ನಿಷ್ಠಾವಂತ ಮುಖ್ಯ ಗುರುಗಳನ್ನು ಸೇವೆಯಿಂದ ಅಮಾನತು ಮಾಡಿರುವುದು ಖಂಡನೀಯ ಎಂದರು.

ಅಮಾನತಿನ ಹಿಂದೆ ರಾಜಕೀಯ ಇಚ್ಛಾಶಕ್ತಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಬಿಇಒ ಅವರು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ. ಸ್ವಜಾತಿ ಶಿಕ್ಷಕರಿಗೆ ಅಧಿಕಾರ ಕೊಡಿಸುವ ಉದ್ದೇಶದಿಂದ ದಲಿತ ಶಿಕ್ಷಕರನ್ನು ಅಮಾನತು ಮಾಡುವ ಕೆಲಸ ಮಾಡುತ್ತಿದ್ದಾರೆ. ರತ್ತಾಳ, ಕರ್ನಾಳ, ಮಲ್ಲಿಬಾವಿ ಸೇರಿದಂತೆ ಇತರೆ ಗ್ರಾಮಗಳ ದಲಿತ ಶಿಕ್ಷಕರನ್ನು ಅಮಾನತು ಮಾಡಿ ಸ್ವಜಾತಿ ಶಿಕ್ಷಕರಿಗೆ ಮುಖ್ಯ ಗುರುಗಳ ಪ್ರಭಾರ ವಹಿಸಿಕೊಟ್ಟಿದ್ದಾರೆ ಎಂದು ದೂರಿದರು.

ದಿವಳಗುಡ್ಡ ಶಾಲಾ ಆವರಣದಲ್ಲಿ ಕೆಲವರು ಅಕ್ರಮವಾಗಿ ನಿವೇಶನ ಒತ್ತುವರಿ ಮಾಡಿದ್ದಾರೆ. ಈಗಾಗಲೇ ಕೆಲವರು ನಿವೇಶನದಲ್ಲಿ ಟೀನ್‌ ಹಾಕಿಕೊಂಡಿದ್ದು, ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮೈದಾನವಿಲ್ಲದೆ ಶಾಲಾ ಮಕ್ಳಳು ಆಟಕ್ಕೆ ಪರದಾಡುವಂತ್ತಾಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಬಿಇಒ ಅವರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಮನವಿಯನ್ನು ಶಿಕ್ಷಣ ಸಂಯೋಜಕ ಕೆ. ಅಮರೇಶ ಅವರಿಗೆ ಸಲ್ಲಿಸಲಾಯಿತು. ಸಮಿತಿ ಪ್ರಮುಖರಾದ ಮರಿಲಿಂಗಪ್ಪ ಹುಣಸಿಹೊಳೆ, ಜೆಟ್ಟೆಪ್ಪ ನಾಗರಾಳ, ಚಂದ್ರಶೇಖರ ಬಲಶೆಟ್ಟಿಹಾಳ, ಮಹೇಶ ಯಾದಗಿರಿ, ಸಾಬಣ್ಣ, ಪರಮಣ್ಣ, ಮಲ್ಲೇಶ ಹೊಸ್ಮನಿ, ಮಲ್ಲಿಕಾರ್ಜುನ ಬಡಿಗೇರ, ಬುದ್ಧಿವಂತ ನಾಗರಾಳ, ಭೀಮಣ್ಣ ಖ್ಯಾತನಾಳ, ಬಸಪ್ಪ ಬಂಡಾರಿ, ಬಸವರಾಜ ದೊಡ್ಮನಿ, ಯಲ್ಲಪ್ಪ ಗುಡಂಲಗೇರಾ, ನಿಂಗಪ್ಪ, ಸಂಗಪ್ಪ, ಬಸವರಾಜ ತಳವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next