ಸುರಪುರ: ಪ್ರತಿಯೊಬ್ಬ ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವ ಮೂಲಕ ಜೀವವನ್ನು ರಕ್ಷಿಸಿಕೊಳ್ಳಬೇಕು. ಸಂಚಾರಿ ನಿಯಮ ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮದೊಂದಿಗೆ ದಂಡ ವಿಧಿಸಲಾಗುತ್ತದೆ ಎಂದು ಡಿವೈಎಸ್‌ಪಿ ಶಿವನಗೌಡ ಪಾಟೀಲ ಹೇಳಿದರು.
ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ಗುರುವಾರ ವಾಹನ ಚಾಲಕರಿಗೆ ಕಾನೂನು ಜಾಗೃತಿ ಮೂಡಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಅಕ್ಷಮ್ಯ ಅಪರಾಧ. ಅನಾಹುತ ಘಟಿಸಿದಾಗ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ವಾಹನಗಳಿಗೆ ವಿಮೆ ಮಾಡಿಸದೆ ರಸ್ತೆಗೆ ತರವುದು, ಚಲಾಯಿಸುವುದು ಗಂಭಿರ ಆರೋಪ. ಅವಘಡ ನಡೆದಾಗ ಸಂತ್ರಸ್ತರಿಗೆ ವೈಕ್ತಿಕವಾಗಿ ಪರಿಹಾರ ಭರಿಸಬೇಕಾದ ಪ್ರಸಂಗ ಎದುರಾಗುತ್ತದೆ. ಕಾರಣ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಾಹನ ದಾಖಲಾತಿಗಳನ್ನು ಬಳಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಪೊಲೀಸರು ವಾಹನ ತಡೆದು ತಪಾಸಣೆ ಮಾಡಿದಾಗ ದಾಖಲಾತಿ ತೋರಿಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ ಎಂದರು.
ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರು ಕೂರಬಾರದು. ಒಂದೇ ಬೈಕ್‌ನಲ್ಲಿ ಮೂವರು ಕುಳಿತು ಚಾಲನೆ ಮಾಡಿದರೆ ಶಿಕ್ಷಾರ್ಹ ಅಪರಾಧ. ಕಾರ ಚಾಲಕರು ಸಿಟ್ ಬೆಲ್r ಧರಿಸಿ ಚಾಲನೆ ಮಾಡಬೇಕು. ನಗರದಲ್ಲಿ ನಿಯಮ ಮೀರಿ ಅತೀ ವೇಗವಾಗಿ ವಾಹನ ಚಲಾಯಿಸಿದಲ್ಲಿ ದಂಡ ವಿಧಿಸಲಾಗುತ್ತದೆ. ವಾಹನಗಳ ನಂಬರ್‌ಗಳು ಸ್ಪಷ್ಟವಾಗಿ ಕಾಣುವಂತೆ ಬರೆಸಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧಿಧೀಜಿ ವೃತ್ತ, ದರಬಾರಿ ರಸ್ತೆ, ತಹಶೀಲ್ದಾರ್, ಕೋರ್ಟ್ ಮಾರ್ಗಗಳಲ್ಲಿ ವಾಹನಗಳನ್ನು ತಡೆದು ಪರಿಶೀಲಿಸಿದರು. ದಾಖಲಾತಿ ಇಲ್ಲದವರಿಗೆ ಎಚ್ಚರಿಕೆ ನೀಡುವ ಜತೆಗೆ ದಂಡ ಕೂಡ ವಿಧಿಸಲಾಯಿತು.
ಪೊಲೀಸ್ ಇನ್ಸ್‌ಪೆಕ್ಟರ್ ಆನಂದರಾವ್, ಪಿಎಸ್‌ಐ ಸೋಮಲಿಂಗ ಒಡೆಯರ್, ಎಎಸ್‌ಐ ಚಂದ್ರಶೇಖರ ನಾಯಕ, ಸಿಬ್ಬಂದಿಗಳಾದ ಮನೋಹರ ರಾಠೊಡ, ದಯಾನಂದ ಬಿರಾದಾರ, ಚಂದಪ್ಪಗೌಡ, ಮಹಾಂತೇಶ ಸ್ವಾಮಿ ಇದ್ದರು.