Advertisement
ಯಾವುದೇ ಮೂಲ ಸೌಲಭ್ಯಗಳಿಲ್ಲದೇ ಇರುವ ಕುಗ್ರಾಮದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದ ಹಳ್ಳಿ ಹೈದ ಕೆಎಎಸ್ ಪರೀಕ್ಷೆ ಬರೆದು ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್‍ಯಾಂಕ್ ಪಡೆದು, ಹುಬ್ಬೇರಿಸುವಂತೆ ಮಾಡಿದ್ದಾರೆ.
Related Articles
Advertisement
1146 ಅಂಕ ಪಡೆದು ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್‍ಯಾಂಕ್ ಗಳಿಸಿ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ನಿತ್ಯ 8ರಿಂದ 10 ತಾಸು ಅಭ್ಯಾಸ ಮಾಡಿದ್ದೇನೆ. ನನಗೆ ರಜೆ ನೀಡಿ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ನನ್ನನ್ನು ಪ್ರೋತ್ಸಾಹಿಸಿದ ಇಲಾಖೆ ನಿರ್ದೇಶಕ ಅಶೋಕ ಕುಮಾರ ಅವರನ್ನು ಯಾವತ್ತು ಮರೆಯಲಾರೆ ಎಂದು ವೀರೇಶ ಸ್ಮರಿಸಿಕೊಳ್ಳುತ್ತಾರೆ.
ಸಾಧನೆ ಹಿಂದೆ ನನ್ನ ತಂದೆ ಅಮರಣ್ಣ, ಅಣ್ಣ ಶರಣಬಸವ, ಅಕ್ಕಈರಮ್ಮ, ಭಾವ ಬಸವಣ್ಣೆಪ್ಪ ಅಂಗರಗಿ ಅವರ ಬೆಂಬಲ ಪ್ರೋತ್ಸಾಹ ಸದಾ ನನಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ನನ್ನ ಇಚ್ಛೆ ಆಗಿತ್ತು ಎಂದು ವೀರೇಶ “ಉದಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಪರೀಕ್ಷೆ ಪಾಸು ಮಾಡಲು ನನಗೆ ದಿನ ಪತ್ರಿಕೆಗಳೇ ಕಾರಣ. ಅದರಲ್ಲೂ ವಿಶೇಷವಾಗಿ ಆಂಗ್ಲ ಮತ್ತು ಕನ್ನಡ ದಿನಪತ್ರಿಕೆಗಳು ಪ್ರಮುಖ ಕಾರಣ. ಎಲ್ಲ ಪತ್ರಿಕೆಗಳನ್ನು ನಿತ್ಯ ಬಿಡದೇ ಓದುತ್ತಿದ್ದೆ, ಕೆಲ ಸ್ಪರ್ಧಾತ್ಮಕ ಪತ್ರಿಕೆಗಳು, ನಿಯತಕಾಲಿಕೆಗಳು ಕೂಡ ನೆರವಿಗೆ ಬಂದವು ಎಂದು ವೀರೇಶ ಧನ್ಯತಾಭಾವ ವ್ಯಕ್ತಪಡಿಸುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಬಹುದು ಎನ್ನುವುದಕ್ಕೆ
ನಾನೇ ಉದಾಹರಣೆ. ಕನ್ನಡವನ್ನು ನಾವು ಸರಿಯಾಗಿ, ಚೆನ್ನಾಗಿ ಕಲಿಯಬೇಕು. ಹೆಚ್ಚು ಹೆಚ್ಚು ಸಾಹಿತ್ಯ ಅಧ್ಯಯನ ಮಾಡಬೇಕು. ಸಾಹಿತ್ಯ ಅಧ್ಯನದಿಂದ ನಮ್ಮಲ್ಲಿ ಶಬ್ದ ಸಂಗ್ರಹವಾಗುತ್ತದೆ. ಭಾಷೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಕನ್ನಡವನ್ನು ಚೆನ್ನಾಗಿ ಕಲಿತರೆ ಆಂಗ್ಲ ಭಾಷೆ ಸರಳವಾಗಿ ಕಲಿಯಬಹುದು. ಅಲ್ಲದೇ ಯಾವುದೇ ವಿದ್ಯಾರ್ಥಿಗಳು ಬಯಸಿದಲ್ಲಿ ಮಾರ್ಗದರ್ಶನ ಮಾಡಲು ಸಿದ್ಧನಾಗಿದ್ದೇನೆ.
ವೀರೇಶ ಅಮರಣ್ಣ ಶೆಟ್ಟಿ ಸಿದ್ದಯ್ಯ ಪಾಟೀಲ