ಸುರಪುರ: ರಾಜ್ಯದಲ್ಲಿ ಮಾತೃಭಾಷೆಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಆಡಳಿತ ಭಾಷೆಯನ್ನಾಗಿ ಸರಕಾರ ಜಾರಿಗೆ ತಂದಿದ್ದರು ಕೂಡ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಮಿತಿ ರಾಜ್ಯದಾದ್ಯಂತ ಫೆ. 15ರಂದು ಭಾಷಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಕರೆ ನೀಡಿದರು.
ಜಾಗೃತಿ ಸಮಾವೇಶ ನಿಮಿತ್ತ ನಗರದ ಟೇಲರ್ ಮಂಜಿಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನೆಲ. ಜಲ, ಭಾಷೆ ಸಂರಕ್ಷಣೆಯೊಂದಿಗೆ ಸಮಾಜಿಕ ಸೇವೆಯಲ್ಲಿ ವೇದಿಕೆ ನಿರಂತರವಾಗಿ ಕೆಲಸ ಮಾಡುತ್ತಿದೆ. ವೇದಿಕೆ ಕಾರ್ಯಕರ್ತರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಜಾಗೃತಿ ಸಮಾವೇಶದ ರೂಪುರೇಷೆ ಮತ್ತು ಕಾರ್ಯಕ್ರಮ ಯಶಸ್ವಿ ಕುರಿತು ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಕೆಲ ಮಾಹಿತಿ ನೀಡಿದರು. ಇದೇ ವೇಳೆ ಮಂಗ್ಯಾಳ ಮತ್ತು ಎಸ್ ಎಚ್ ಖಾನಾಪುರ ಗ್ರಾಮ ಶಾಖೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಖಾನಾಪುರ ಎಸ್ ಎಚ್: ನಾಗರಾಜ ಗುತ್ತೇದಾರ ಗೌರವಾಧ್ಯಕ್ಷ, ನಿಂಗಪ್ಪಗೌಡ ಅಧ್ಯಕ್ಷ, ಭೀಮಣ್ಣ ರುಕಾ¾ಪುರ ಉಪಾಧ್ಯಕ್ಷ, ನಾಗರಾಜ ಪ್ರಧಾನ ಕಾರ್ಯದರ್ಶಿ, ಗೋಪಾಲ ಸಹ ಕಾರ್ಯದರ್ಶಿ, ಮಲ್ಲಿಕಾರ್ಜುನ ಸಂಘಟನಾ ಕಾರ್ಯದರ್ಶಿ, ಮಹೇಶ ದೊರೆ ಸಂಚಾಲಕ, ಸಿದ್ದು, ದೇವರಾಜ ನವಲಗುಡ್ಡ ಖಜಾಂಚಿ. ಮಂಗ್ಯಾಳ: ರಾಮಯ್ಯ ಗೌರವಾಧ್ಯಕ್ಷ, ಪ್ರಭು ಅಧ್ಯಕ್ಷ, ಹಣಮಂತ್ರಾಯ ಉಪಾಧ್ಯಕ್ಷ, ಪರುಶುರಾಮ ನಾಯಕ ಕಾರ್ಯದರ್ಶಿ, ಬಾಲದಂಡಪ್ಪ ಸಹಕಾಯದರ್ಶಿ, ಸಿದ್ರಾಮ ಟನಕೇದಾರ ಸಹ ಕಾರ್ಯದರ್ಶಿ, ಶಿವುಕುಮಾರ ಸಂಘಟನಾ ಕಾರ್ಯದರ್ಶಿ, ಸಿದ್ದು ಸಂಚಾಲಕ ಬಾಲದಂಡಪ್ಪ ಟಣಕೇದಾರ ಖಜಾಂಚಿ. ಜಿಲ್ಲಾ ಕಾರ್ಯದರ್ಶಿ ಸಿದ್ದು ನಾಯಕ, ತೇಜರಾಜ ರಾಠೊಡ, ವಿಶ್ವರಾಧ್ಯ ದಿಮ್ಮಿ, ಭೀಮು ಮಲ್ಲಿಭಾವಿ, ರಿಯಾಜ್ ಪಟೇಲ್, ದೀಪಕ ಒಡೆಯರ, ಹಣಮಂತ ಶಖಾಪುರ, ಶ್ರೀನಿವಾಸ ನಾಯಕ, ಹಣಮಂತ ಹಾಲಗೇರಿ, ಶ್ರೀನಿವಾಸ ನಾಯಕ, ಪ್ರಕಾಶ, ಆನಂದ ಮಾಚಗುಂಡಾಳ, ಮಲ್ಲು ಯಾದವ, ಬಲಭೀಮ, ರಮೇಶ ಖಾನಾಪುರ, ಗೋವಿಂದ ಕವಡಿಮಟ್ಟಿ ಇದ್ದರು.