Advertisement

ಬುದ್ಧ ವಿಹಾರ ಅಭಿವೃದ್ಧಿಗಾಗಿ ಹಲವಾರು ಯೋಜನೆ

04:30 PM Jul 12, 2019 | Team Udayavani |

ಸುರಪುರ: ವರಜ್ಯೋತಿ ಭಂತೇಜಿ ಮಾರ್ಗದರ್ಶನದಲ್ಲಿ ನಗರದ ಬುದ್ಧ ವಿಹಾರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹೊಂದಲಾಗಿದೆ ಎಂದು ಅಂಬೇಡ್ಕರ್‌ ಜಯಂತ್ಯು ತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಹೇಳಿದರು.

Advertisement

ನಗರದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ವೃತ್ತದಲ್ಲಿ ಗೋಲ್ಡನ್‌ ಕ್ಲೇವ್‌ ಬುದ್ಧ ವಿಹಾರ ಟ್ರಸ್ಟ್‌ ರಚನೆ ಭಿತ್ತಿ ಪತ್ರಗಳ ಬಿಡಿಗಡೆ ಮಾಡಿ ಅವರು ಮಾತನಾಡಿದರು.

ಬುದ್ಧ ವಿಹಾರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಬಾಟಲಿಗಳನ್ನು ಬಿಸಾಡಿ ವಿಹಾರವನ್ನು ಅಂದಗೆಡಿಸುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಲು ಸಮಿತಿಯು ಬುದ್ಧ ವಿಹಾರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಇದೇ ಉದ್ದೇಶದಿಂದ ವಿಹಾರದ ಅಭಿವೃದ್ಧಿ ಕುರಿತು ಜವಾಬ್ದಾರಿ ವಹಿಸಲು ಜು. 13ರಂದು ಬೆಳಗ್ಗೆ 10:00ಕ್ಕೆ ಬುದ್ಧ ವಿಹಾರದಲ್ಲಿ ಸಭೆ ಕರೆಯಲಾಗಿದೆ. ದಲಿತ ಸಮುದಾಯ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ಮನವಿ ಮಾಡಿದರು.

ರಾಹುಲ್ ಹುಲಿಮನಿ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಸಹಕಾರಿ ಸಂಘ, ಶಿಕ್ಷಣ ಸಂಸ್ಥೆ, ವಸತಿ ನಿಲಯ, ಸಂತ್ರಸ್ತರ ಸಾಂತ್ವಾನ ಕೇಂದ್ರ ಸ್ಥಾಪನೆ ಸೇರಿದಂತೆ ಸಮಾಜಮುಖೀ ಕಾರ್ಯಚಟುವಟಿಕೆ ಆಯೋಜನೆ ಜತೆಗೆ ಗೌತಮ್‌ ಬುದ್ಧರ 1011 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ವಿವರಿಸಿದರು.

Advertisement

ದೇವಿಂದ್ರಪ್ಪ ಪತ್ತಾರ, ಶಂಕರಪ್ಪ ಶಾಖಾನವರ, ನಿಂಗಣ್ಣ ಗೋನಾಲ, ಮಾಳಪ್ಪ ಕಿರದಹಳ್ಳಿ, ರಾಮಚಂದ್ರ ವಾಗಣಗೇರಾ, ರಮೇಶ ಅರಕೇರಿ, ಮಲ್ಲಿಕಾರ್ಜುನ ವಾಗಣಗೇರಾ, ವಿಶ್ವನಾಥ ಹೊಸ್ಮನಿ, ಆಕಾಶ ಕಟ್ಟಿಮನಿ, ಶಂಕರ ಬೊಮ್ಮನಹಳ್ಳಿ, ರಮೇಶ ಬಡಿಗೇರ, ಮಲ್ಲು ಮುಷ್ಠಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ, ರಾಜು ದೊಡ್ಮನಿ, ಮಲ್ಲು ಜಾಲಿಬೆಂಚಿ, ಮಲ್ಲಪ್ಪ ಮೇಟಿ, ಪರಮಣ್ಣ ನಾಗರಾಳ, ಬಸವರಾಜ ಪೂಜಾರಿ, ಮಾನಪ್ಪ ಬಳಬಟ್ಟಿ,ಅಂಬ್ರೇಶ ಮಾವಿನಮಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next