Advertisement
ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಷ್ಟು ದಿನ ಕೆಲಸ ಮಾಡಿದೆ ಎನುವುದಕ್ಕಿಂತ ಸಾರ್ವಜನಿಕರ ಸಮಸ್ಯೆಗಳಿಗೆ ನಾನೆಷ್ಟು ಸ್ಪಂದಿಸಿದೆ. ಜನಸ್ನೇಹಿಯಾಗಿ ಕೆಲಸ ಮಾಡಿದೆ ಎನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಇಲ್ಲಿ ಇರುವಷ್ಟು ದಿನ ಉತ್ತಮ ಸೇವೆ ನೀಡಿದ ತೃಪ್ತಿ ನನಗಿದೆ ಎಂದು ಹೇಳಿದರು.
Related Articles
ಸನ್ಮಾನವೇ ಸಾಕ್ಷಿಯಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಕಾನೂನಿಂದ ಎಲ್ಲವನ್ನು ನಿಯಂತ್ರಿಸುತ್ತೇನೆ ಎನ್ನುವುದು ಅಸಾಧ್ಯ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ. ಕಾರಣ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ
ನೀಡಿದರು.
Advertisement
ನೂತನವಾಗಿ ಅಧಿಕಾರ ವಹಿಸಿಕೊಂಡ ಸಿಪಿಐ ಸಾಹೇಬಗೌಡ ಪಾಟೀಲ ಮಾತನಾಡಿ, ಉತ್ತಮವಾಗಿ ಕೆಲಸ ಮಾಡಬೇಕು. ಕಾನೂನು ಪಾಲನೆಯೊಂದಿಗೆ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು. ಜನಸ್ನೇಹಿ ಪೊಲೀಸ್ ಆಗಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ. ಆನಂದರಾವ್ ಅವರಿಗೆ ನೀಡಿದ ಸಲಹೆ ಸಹಕಾರ ನನಗೂ ನೀಡಿ ಉತ್ತಮ ಸೇವೆಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಶಹಾಪುರ ಸಿಪಿಐ ಶ್ರೀನಿವಾಸರಾವ ಅಲಾಪುರ ಮಾತನಾಡಿ ಪೊಲೀಸ್ ಸೇವೆ ಅತ್ಯಂತ ಕಠಿಣವಾಗಿದೆ. ನಿಮ್ಮಂತೆ ನಮಗೂ ಆಸೆ ಆಕಾಂಕ್ಷೆ ಇರುತ್ತವೆ. ಕಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಇದೆಲ್ಲವನ್ನು ಮರೆತು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸೇವೆಯಲ್ಲಿಯೇ ಸಂಭ್ರಮ, ಸಂತಸ ಕಾಣುತ್ತೇವೆ. ಆದ್ದರಿಂದ ಸಾರ್ವಜನಿಕರು ಕಾನೂನು ಪಾಲನೆಯೊಂದಿಗೆ ಶಾಂತಿ ಸೌರ್ಹಾದ ವಾತಾವರಣಕ್ಕೆ ಪೊಲೀಸರ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.
ಭೀಮ ನಾಯಕ ಬೈರಿಮಡ್ಡಿ, ಧರ್ಮರಾಜ ಬಡಿಗೇರ, ಉಸ್ತಾದ ವಜಾಹತ್ ಹುಸೇನ್, ನಿಂಗಣ್ಣ ಗೋನಾಲ, ತಿಪ್ಪಣ್ಣ, ಮಾನಪ್ಪ, ರಾಮಣ್ಣ, ಖಾಜಾ ಖಲೀಲ್ ಅರಕೇರಿ ಇದ್ದರು. ಪಿಎಸ್‌ಐ ಶರಣಪ್ಪ ನಾಯಕ ಸ್ವಾಗತಿಸಿದರು. ಮುಖ್ಯ ಪೇದೆ ಚಂದ್ರಕಾಂತ ನಿರೂಪಿಸಿದರು. ಪೇದೆ ರವಿಕುಮಾರ ವಂದಿಸಿದರು.