Advertisement

ಸುರಪುರ ತಾಲೂಕಿನಲ್ಲಿ 15 ಕೋವಿಡ್‌ ಪ್ರಕರಣ ಪತ್ತೆ

12:23 PM Jul 10, 2020 | Naveen |

ಸುರಪುರ: ತಾಲೂಕಿನಲ್ಲಿ ಗುರುವಾರ ಒಂದೇ ದಿನ 15 ಪ್ರಕರಣಗಳು ಪತ್ತೆಯಾಗಿವೆ. ಪೊಲೀಸ್‌ ಕಾನಸ್ಟೇಬಲ್‌ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸದ್ಯಕ್ಕೆ ನಗರದ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ .

Advertisement

ನಗರದ ಸಾರಿಗೆ ಘಟಕದಲ್ಲಿ 1 ಮತ್ತು ಪೊಲೀಸ್‌ ಪೇದೆ ಒಬ್ಬ ಸೇರಿ 4, ದಿವಳಗುಡ್ಡ 7, ಸೂಗೂರು 4, ಹುಣಸಗಿ 1 ಹೀಗೆ ಒಟ್ಟು 15 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲರನ್ನು ನಗರದ ನಿಷ್ಠಿ ಇಂಜಿನಿಯಂರಿಂಗ್‌ ಕಾಲೇಜು ಐಸೋಲೇಶನ್‌ ವಾರ್ಡ್‌ಗೆ ಸೇರಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಆರ್‌.ವಿ. ನಾಯಕ ತಿಳಿಸಿದರು. ಕಾನ್ ಸ್ಟೇಬಲ್‌ಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತ ಪೇದೆ ಸಂಪರ್ಕ ಇರುವುದರಿಂದ ಆರೋಗ್ಯ ತಪಾಸಣೆಗೆ ಎಲ್ಲ ಕಾನಸ್ಟೇಬಲ್‌ ಗಳಿಗೆ ಸೂಚಿಸಲಾಗಿದೆ.

ಸಾರ್ವಜನಿಕರ ರಕ್ಷಣೆ ಮತ್ತು ದೂರು ಸ್ವೀಕಾರಕ್ಕೆ ಹಳೆ ಪೊಲೀಸ್‌ ಠಾಣೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಿವೈಎಸ್‌ಪಿ 94808-03637 ಮತ್ತು ತಮ್ಮನ್ನು ಸಂಪರ್ಕಿಸುವಂತೆ ಸಿಪಿಐ ಎಸ್‌. ಎಂ. ಪಾಟೀಲ(94808-03583) ತಿಳಿಸಿದರು. ಕೋರ್ಟ್‌ ಪೂರ್ಣ ಸ್ಯಾನಿಟೈಸರ್‌ ಮಾಡಲಾಗಿದೆ. ಕಾನಸ್ಟೇಬಲ್‌ನ ಪ್ರಾಥಮಿಕ ಸಂಪರ್ಕದಲ್ಲಿರುವ ಕೋರ್ಟ್‌ ಸಿಬ್ಬಂದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು,

Advertisement

Udayavani is now on Telegram. Click here to join our channel and stay updated with the latest news.

Next