Advertisement

ಪ್ರಗತಿ ಪಥದತ್ತ ಬಸವೇಶ್ವರ ಬ್ಯಾಂಕ್‌ ದಾಪುಗಾಲು

04:15 PM Nov 17, 2019 | Team Udayavani |

ಸಿದ್ದಯ್ಯ ಪಾಟೀಲ
ಸುರಪುರ
: ಕಳೆದ 25 ವರ್ಷಗಳ ಹಿಂದೆ ಆರಂಭಗೊಂಡ ಬಸವೇಶ್ವರ ಪತ್ತಿನ ಸಹಕಾರಿ ಸಂಘ ಕೋಟ್ಯಂತರ ರೂ. ವಹಿವಾಟಿನೊಂದಿಗೆ ಪ್ರಗತಿಯತ್ತ ದಾಪುಗಾಲು ಇಟ್ಟಿದ್ದು ಶೀಘ್ರದಲ್ಲಿಯೇ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಸಿದ್ಧತೆಯಲ್ಲಿದೆ. ಸಮಾಜದ ಏಳ್ಗೆ ಮತ್ತು ಬಡವರಿಗೆ ನೆರವಾಗುವ ಉದ್ದೇಶದಿಂದ 1994-95ರಲ್ಲಿ ಸಹಕಾರಿ ಇಲಾಖೆಯಲ್ಲಿ ನೋಂದಾಯಿತವಾಗಿ 500 ಸದಸ್ಯರು 5 ಲಕ್ಷ ರೂ. ಬಂಡವಾಳದೊಂದಿಗೆ ಆರಂಭಗೊಂಡ ಸಂಘ ಪ್ರಸ್ತುತ 2,559 ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಸಾಲಿನಲ್ಲಿ 66,14,800 ಶೇರು ಬಂಡವಾಳದೊಂದಿಗೆ 64,76,146 ರೂ. ನಿವ್ವಳ ಲಾಭ ಪಡೆದಿದೆ. ಪ್ರಸ್ತುತ ಡಾ| ಸುರೇಶ ಸಜ್ಜನ್‌ ಅಧ್ಯಕ್ಷತೆಯಲ್ಲಿ ಸಂಘ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ.

Advertisement

ನಾಲ್ಕು ಶಾಖೆಗಳು: ತಾಲೂಕು ದೊಡ್ಡ ಕ್ಷೇತ್ರ ಹೊಂದಿರುವುದರಿಂದ ಸಮಾಜ ಮತ್ತು ಸಂಘ ಸದಸ್ಯರ ಬೇಡಿಕೆಗೆ ಅನುಗುಣವಾಗಿ ತಾಲೂಕಿನಲ್ಲಿ 4 ಶಾಖೆ ಹೊಂದಿದೆ. ಹುಣಸಗಿ ಶಾಖೆಯಲ್ಲಿ 300 ಸದಸ್ಯರು 11,08,336 ರೂ. ಲಾಭ, ಕೆಂಭಾವಿ ಶಾಖೆಯಲ್ಲಿ 406 ಸದಸ್ಯರು 10,58,353 ರೂ. ಲಾಭಾಂಶ ಪಡೆದಿದೆ. ಕಕ್ಕೇರಾ ಶಾಖೆಯಲ್ಲಿ 220 ಸದಸ್ಯರು 11,23.170 ಲಾಭಾಂಶ, ಕೊಡೇಕಲ್‌ ಶಾಖೆಯಲ್ಲಿ 292 ಸದಸ್ಯರು ಮತ್ತು 2,64,093 ರೂ. ಲಾಭಾಂಶ ಪಡೆದಿದೆ. ಈ ಸ್ಟಾಂಪಿಂಗ್‌ ಸೌಲಭ್ಯ: ನಗರದ ಕೇಂದ್ರ ಸೇರಿದಂತೆ 4 ಶಾಖಾ ಕಚೇರಿಗಳಲ್ಲಿ ಈ ಸ್ಟಾಂಪಿಂಗ್‌ ಸೇವೆ ಒದಗಿಸುತ್ತಿದೆ. ಜೊತೆಗೆ ಬಂಗಾರ ಮೇಲೆ ದೀರ್ಘಾವಧಿ-ಅಲ್ಪಾವಧಿ  ಸಾಲ ಸೌಲಭ್ಯ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಸ್ಥರಿಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಘದ ಭದ್ರತೆ: 66,14,800 ಶೇರು ಬಂಡವಾಳ  ಹಾಗೂ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,94,31,579 ಠೇವಣಿ ಇರಿಸಲಾಗಿದೆ.

ಸಂಘದ ಆರ್ಥಿಕತೆ, ಕಟ್ಟಡ ಮತ್ತು ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಭದ್ರತೆಗಾಗಿ ಯುನೈಟೆಡ್‌ ಇನ್ಸೂರೆನ್ಸ್‌ ಕಂಪನಿಯಲ್ಲಿ ವಾರ್ಷಿಕ 70,527 ರೂ. ಜೀವವಿಮೆ ಮಾಡಿಸಲಾಗಿದೆ. ಸಾಲ ಸೌಲಭ್ಯ: 5 ಲಕ್ಷ ರೂ.ವರೆಗೆ ಕೃಷಿಯೇತರ ಭೂಮಿ, ಪ್ಲಾಟ್‌, ಓವರ್‌ಡ್ರಾಫ್ಟ್‌, ಗಿರವಿ ಸಾಲದ ವ್ಯವಸ್ಥೆಯಿದೆ. ದೀರ್ಘಾವಧಿ  ಮತ್ತು ಅಲ್ಪಾವಧಿ ಇತರೆ ಸಾಲ ಸೌಲಭ್ಯ ವ್ಯವಸ್ಥೆ ನೀಡುತ್ತಿದೆ.

ಸ್ವಂತ ಕಟ್ಟಡ: ನಗರದ ಕೇಂದ್ರ ಕಚೇರಿ ಸಂಘ ಬಸ್‌ ನಿಲ್ದಾಣದ ಹತ್ತಿರ ಕೋಟ್ಯಂತರ ರೂ. ಮೌಲ್ಯದ ಎರಡು ಮಹಡಿಯ ಸ್ವಂತ ಕಟ್ಟಡ ಹೊಂದಿದೆ. ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಬಾಡಿಗೆ ಬರುತ್ತಿದ್ದ ಸಂಘ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.

ಸಿಬ್ಬಂದಿಗಳು: ಕೇಂದ್ರ ಕಚೇರಿ ಹಾಗೂ ಶಾಖಾ ಕಚೇರಿಗಳಲ್ಲಿ ವ್ಯವಸ್ಥಾಪಕರು ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳಿಗೆ ಸಮವಸ್ತ್ರ ಗುರುತಿನ ಚೀಟಿ ವಿತರಿಸಲಾಗಿದೆ.

Advertisement

ನಿವೇಶನ ಖರೀದಿ: ಕೆಂಭಾವಿ, ಹುಣಸಗಿ, ಕೊಡೇಕಲ್‌, ಕಕ್ಕೇರಾ ಶಾಖಾ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಖರೀದಿಸಲಾಗಿದೆ. ರಾಜಕೋಳೂರು, ಬಲಶೆಟ್ಟಿಹಾಳ, ನಗನೂರ ಗ್ರಾಮಗಳಲ್ಲಿ ಹೊಸದಾಗಿ ಶಾಖಾ ಕಚೇರಿ ಆರಂಭಿಸಲು ಯೋಜನೆ ರೂಪಿಸಿ ಪರವಾನಗಿ ಪಡೆಯಲು ಸಹಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಾಮಾಜಿಕ ಚಟುವಟಿಕೆ: ಸಂಘದ ಸಹಯೋಗದಲ್ಲಿ ಪ್ರತಿ ವರ್ಷ ಸಮಾಜದ ಪ್ರತಿಭಾವಂತ ಬಡಮಕ್ಕಳಿಗೆ ನಗದು ಪುರಸ್ಕಾರ, ಬಡ ಮಕ್ಕಳ ಮದುವೆಗೆ ಆರ್ಥಿಕ ಧನಸಹಾಯ, ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ, ಹುತಾತ್ಮ ಯೋಧರ ಪರಿಹಾರ ನಿಧಿ ಸೇರಿದಂತೆ ಇತರೆ ಸಾಮಾಜಿಕ ಕಾರ್ಯಗಳಿಗೆ ಪತ್ತಿನ ಸಂಘದಿಂದ ನೆರವು ನೀಡಲಾಗುತ್ತಿದೆ. ಪ್ರತಿ ವರ್ಷ ಸಂಘದ ವಾರ್ಷಿಕ ಸಭೆ ಏರ್ಪಡಿಸಿ ಸಂಘದ ಪ್ರಗತಿ ಮತ್ತು ಲಾಭಾಂಶಗಳು ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ. ಸಂಘ 24 ವರ್ಷ ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಜನವರಿಯಲ್ಲಿ ಬೆಳ್ಳಿ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ.

ನಿರ್ದೇಶಕರು  ಮತ್ತು ಸದಸ್ಯರ ಸಹಕಾರದಿಂದ ಸಂಘ ಉತ್ತಮ ಅಭಿವೃದ್ಧಿ ಕಾಣುತ್ತಿದೆ. 4 ಶಾಖೆಗಳನ್ನು ಹೊಂದಿದ್ದು ಬಡವರಿಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಉತ್ತಮ ಲಾಭಾಂಶ ಪಡೆದಿದೆ. ಆ ಮೂಲಕ ಸಹಕಾರಿ ಕ್ಷೇತ್ರದಲ್ಲಿಯೇ ಉತ್ತಮ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೀಘ್ರದಲ್ಲಿಯೇ ಅದ್ದೂರಿಯಾಗಿ ಬೆಳ್ಳಿ ಹಬ್ಬ ಆಚರಿಸಲಾಗುವುದು.
ಡಾ| ಸುರೇಶ ಸಜ್ಜನ್‌,
ಅಧ್ಯಕ್ಷರು, ಬಸವೇಶ್ವರ ಪತ್ತಿನ ಸಹಕಾರಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next