Advertisement

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

12:49 PM May 05, 2024 | Team Udayavani |

ದಾವಣಗೆರೆ: ಭಯೋತ್ಪಾದನೆ ಪೋಷಿಸುತ್ತಿರುವ, ಭಾರತದ ಅಭಿವೃದ್ಧಿ ಸಹಿಸದೇ ಇರುವ ಪಾಕಿಸ್ತಾನ ರಾಹುಲ್‌ ಗಾಂಧಿ  ಪ್ರಧಾನಿ ಆಗಲಿ ಎಂದು ಬಯಸುತ್ತಿರುವುದರ ಹಿಂದಿನ ಅರ್ಥ ಏನು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಪ್ರಶ್ನಿಸಿದರು.

Advertisement

ಶನಿವಾರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಮನೂರು, 33, 34, 36 ನೇ ವಾರ್ಡ್‌, ತರಳುಬಾಳು, ವಿನಾಯಕ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಭಾರತ ಪುನಃ ಭಯೋತ್ಪಾ ದನೆಗೆ ಗುರಿಯಾಗಬೇಕು, ಭಯೋತ್ಪಾದಕರು ಭಾರತದಲ್ಲಿ ಅಟ್ಟಹಾಸ ಮೆರೆಯಬೇಕು, ಭಾರತದ ಅಭಿವೃದ್ಧಿ ಕುಂಠಿತ ಆಗಬೇಕು ಎಂದು ಪಾಕಿಸ್ತಾನ, ರಾಹುಲ್‌ ಗಾಂ ಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ಅಂತಹ ಷಡ್ಯಂತ್ರಕ್ಕೆ ಭಾರತೀಯರು ಉತ್ತರ ನೀಡಬೇಕು ಎಂದರೆ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂದು ಕರೆ ನೀಡಿದರು.

ನರೇಂದ್ರ ಮೋದಿ ಅವರಂತಹ ಗಂಡೆದೆಯ ನಾಯಕ ಇರುವಾಗಲೇ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ, ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಮಾಡುತ್ತಾರೆ, ಅಂಗಡಿಗಳಲ್ಲಿ ಹನುಮಾನ್‌ ಚಾಲೀಸ್‌ ಪಠಣ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ. ಇನ್ನು ಈ ದೇಶಕ್ಕೆ ರಾಹುಲ್‌ ಗಾಂಧಿ ಯಂತಹ ದುರ್ಬಲರು ಪ್ರಧಾನಿಯಾದರೆ ಈ ದೇಶವನ್ನು ಯಾರು ಕಾಪಾಡುತ್ತಾರೆ. ಈ ಬಗ್ಗೆ ಪ್ರಜ್ಞಾವಂತರು ಯೋಚಿಸಿ ಮತಹಾಕಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅ ಧಿಕಾರಕ್ಕೆ ಬಂದರೆ ದುಷ್ಕೃತ್ಯಗಳನ್ನು ಸುಲಭವಾಗಿ ನಡೆಸಬಹುದು ಎಂಬುದು ಪಾಕಿಸ್ತಾನದ ಲೆಕ್ಕಾಚಾರ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿ ಕಾರಕ್ಕೆ ಬಂದ 10 ವರ್ಷಗಳಲ್ಲಿ ನಮ್ಮ ತಂಟೆಗೆ ಬಂದವರನ್ನು ಅವರ ನೆಲಕ್ಕೆ ನುಗ್ಗಿ ಹಡೆಮುರಿ ಕಟ್ಟಿದ್ದೇವೆ. ದಾವಣಗೆರೆಯಲ್ಲೂ ಕಾಂಗ್ರೆಸ್‌ ಗೆಲ್ಲಬೇಕು ಎನ್ನುವ ಮನಸ್ಥಿತಿ ಇರುವವರು ಈ ಬಗ್ಗೆ ಸ್ವಲ್ಪ ಯೋಚಿಸಿ ಮತದಾನ ಮಾಡಿ. ದಿಟ್ಟ ನಾಯಕತ್ವದ ಮೋದಿ ಮತ್ತೂಮ್ಮೆ ಪ್ರಧಾನಿ ಹುದ್ದೆಯಲ್ಲಿ ವಿರಾಜಮಾನವಾಗಬೇಕು ಎಂದರೆ ನೀವು ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಗೆಲ್ಲಿಸಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಜೂ.4ರ ನಂತರ ದೇಶದಲ್ಲಿ ಕಾಂಗ್ರೆಸ್‌ ಧೂಳೀಪಟವಾಗುತ್ತದೆ. ಕಾಂಗ್ರೆಸ್‌ಗೆ ಮತ ನೀಡಿದರೆ ವ್ಯರ್ಥವಾಗುತ್ತೆ. ಬಿಜೆಪಿಗೆ ನೀಡಿದರೆ ಸಾರ್ಥಕವಾಗುತ್ತೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮೋದಿಜೀ ಮೂರನೇ ಅವಧಿಗೆ ಪ್ರಧಾನಿ ಆಗಬೇಕು ಎಂದು ಇಡೀ ದೇಶದ ಜನ ನಿರ್ಧಾರ ಮಾಡಿದ್ದಾರೆ. ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಬೇಕು ಎಂದು ಕ್ಷೇತ್ರದ ಜನ ಸಂಕಲ್ಪ ಮಾಡಿದ್ದಾರೆ. ನಾವು ಈಗಾಗಲೇ ಗೆದಿದ್ದೇವೆ, ಹೆಚ್ಚಿನ ಲೀಡ್‌ ಪಡೆಯಲು ನಾವು, ನಮ್ಮ ಕಾರ್ಯಕರ್ತರು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌ ಮಾತನಾಡಿ, ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ 1.5 ಲಕ್ಷ ಲೀಡ್‌ನ‌ಲ್ಲಿ ಗೆಲ್ಲುತ್ತಾರೆ ಎಂದುಕೊಂಡಿದ್ದೆವು. ಪ್ರಿಯಾಂಕಾ ಗಾಂ ಧಿ ಬಂದು ಹೋದ ಮೇಲೆ ನಾವು 3 ಲಕ್ಷ ಲೀಡ್‌ನ‌ಲ್ಲಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಜಿಲ್ಲಾಧ್ಯಕ್ಷ ಎನ್‌. ರಾಜಶೇಖರ್‌, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ಸಂಕೋಳ್‌ ಚಂದ್ರಶೇಖರ್‌, ಗ್ಯಾರಳ್ಳಿ ಶಿವಕುಮಾರ್‌, ವೀರೇಶ್‌, ಚಂದ್ರಪ್ಪ, ಗೌಡರು ಚನ್ನಪ್ಪ, ಯುವರಾಜ್‌ ಇದ್ದರು. ದೇಶದ್ರೋಹಿಗಳೊಂದಿಗೆ ಕಾಂಗ್ರೆಸ್‌ ಒಳಒಪ್ಪಂದ: ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನಗರ ನಕ್ಸಲರ ಆಟಕ್ಕೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಜಿಹಾದಿಗಳು ಕೂಡ ಬಾಲ ಮುದುಡಿಕೊಂಡು ಇದ್ದಾರೆ. ಮತ್ತೂಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಜಿಹಾದಿ ಮನಸ್ಥಿತಿಯ ಕಾಂಗ್ರೆಸ್ಸಿಗರಿಗೆ ದೇಶ ಬಿಟ್ಟು ಹೋಗುವ ಪರಿಸ್ಥಿತಿ ಬರಲಿದೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.

ಕಾಂಗ್ರೆಸ್‌ ದೇಶದ್ರೋಹಿಗಳ ಜೊತೆ ಒಳಒಪ್ಪಂದ ಮಾಡಿಕೊಂಡು ಚುನಾವಣೆ ನಡೆಸುತ್ತಿದೆ. ಇಡೀ ದೇಶದ ನಗರ ನಕ್ಸಲರ ಗಂಜಿ ಕೇಂದ್ರ ಕರ್ನಾಟಕವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕ ಎಟಿಎಂ ಆಗಿದೆ. ರಾಜ್ಯವನ್ನು ಕತ್ತಲಿನಲ್ಲಿಟ್ಟಿರುವ ಕಾಂಗ್ರೆಸ್‌ಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದ್ದು, ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next